ಹಾವೇರಿ: ನಗರದಲ್ಲಿ ಸೋಮವಾರ ರಾತ್ರಿ 7.30ರಿಂದ 8 ಗಂಟೆಯೊಳಗೆ ಎರಡು ಬಡಾವಣೆಗಳಲ್ಲಿಸರ ಅಪಹರಣ ನಡೆದಿದೆ.
ವಿದ್ಯಾನಗರದ ಶಾಂತದೇವಿ ಪಟೆಗಾರ ಮತ್ತು ಬಸವೇಶ್ವರನಗರದ ಲಲಿತಾ ಹಿರೇಮಠ ಚಿನ್ನದ ಸರ ಕಳೆದುಕೊಂಡವರು.
ಈ ಮಹಿಳೆಯರು ತಮ್ಮ ಬಡಾವಣೆಗಳಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ,ಬ್ಲಾಕ್ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ. ಸಂಜೆ ವೇಳೆ ನಡೆದ ಈ ಘಟನೆಯಿಂದ ನಿತ್ಯ ವಾಕಿಂಗ್ ಮಾಡುತ್ತಿದ್ದ ಮಹಿಳೆಯರು ಭಯಭೀತರಾಗಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.