ADVERTISEMENT

ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯ: ಪ್ರಭು ಮರಾಠೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:47 IST
Last Updated 8 ಸೆಪ್ಟೆಂಬರ್ 2024, 13:47 IST
ರಟ್ಟೀಹಳ್ಳಿ ತಾಲ್ಲೂಕು ಕುಡುಪಲಿಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ.ಸಿ. ಸದಸ್ಯರು ಶಿಕ್ಷಕರಿಗೆ ಸನ್ಮಾನಿಸಿದರು
ರಟ್ಟೀಹಳ್ಳಿ ತಾಲ್ಲೂಕು ಕುಡುಪಲಿಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ.ಸಿ. ಸದಸ್ಯರು ಶಿಕ್ಷಕರಿಗೆ ಸನ್ಮಾನಿಸಿದರು   

ರಟ್ಟೀಹಳ್ಳಿ: ಶಿಕ್ಷಕರ ಮಾರ್ಗದರ್ಶನ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯವಾಗಿದೆ. ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ ಎಂದು ಎಸ್.ಡಿ.ಎಂ.ಸಿ. ಸದಸ್ಯ ಪ್ರಭು ಮರಾಠೆ ಹೇಳಿದರು.

ತಾಲ್ಲೂಕಿನ ಕುಡಪಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮತ್ತು ಗಂಡು ಮಕ್ಕಳ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಎಸ್.ಡಿ.ಎಂ.ಸಿ. ಸದಸ್ಯರು ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹೇಂದ್ರ ಕುಸಗೂರು ಮಾತನಾಡಿ, ಮನುಷ್ಯನ ಜೀವನದಲ್ಲಿ ಶಿಕ್ಷಣ ಅತ್ಯಂತ ಮುಖ್ಯ. ಪ್ರತಿಯೊಬ್ಬರೂ ಸಂಸ್ಕಾರಯುತ ಶಿಕ್ಷಣ ಪಡೆಯಬೇಕು ಎಂದರು.

ADVERTISEMENT

ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹೇಶಪ್ಪ ಕುಸಗೂರು, ಕರಿಯಪ್ಪ ಚೌಡಕ್ಕನವರ, ಉಪಾಧ್ಯಕ್ಷೆ ರೂಪಾ ಹರಪನಹಳ್ಳಿ, ಲತಾ ಕುಸಗೂರು, ಸುಜಾತಾ ಮರಿಗೌಡ್ರ, ವನಿತಾ ಕುಸಗೂರು, ಗೀತಾ ಹಿರೇಮಠ, ಮುಖ್ಯ ಶಿಕ್ಷಕ ಎಂ.ಆರ್. ಮರಿಗೌಡ್ರ, ಎಸ್.ಬಿ. ಬಣಕಾರ, ಜಿ.ಎಂ. ಮೆಣಸಿನಕಾಯಿ, ಎಸ್.ಎಚ್. ಚಂದ್ರಕಲಾ, ಜಿ.ಎನ್. ಕಲ್ಮಣ್ಣನವರ, ಎಸ್.ಎಸ್ ದೊಡ್ಡಮನಿ, ಹಸೀನಾ ಬೇಲಿಮನಿ, ಎಂ.ಆರ್.ಕಟಗಿ, ಸುವರ್ಣ ಹೊಸಮನಿ, ಬಸಮ್ಮ. ಜಿ.ಟಿ. ಸುನೀತಾ ತಳವಾರ ಸೌಮ್ಯ ಕರೇಗೌಡ್ರ, ಶಿಂರಾನ್ ದೊಡ್ಡಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.