ADVERTISEMENT

ಬಾಬಾ ರಾಮದೇವ್‌ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ವಕ್ತಾರ ಡಾಂಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 2:29 IST
Last Updated 7 ಜೂನ್ 2021, 2:29 IST
ಡಾ.ಸಂಜಯ ಡಾಂಗೆ
ಡಾ.ಸಂಜಯ ಡಾಂಗೆ   

ಹಾವೇರಿ: ‘ಅಲೋಪಥಿ ವೈದ್ಯ ಪದ್ಧತಿ ಮೂರ್ಖ ವಿಜ್ಞಾನವಾಗಿದೆ. ಅಲೋಪಥಿ ಔಷಧವನ್ನು ಸೇವಿಸಿ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಯೋಗಗುರು ಬಾಬಾ ರಾಮದೇವ್‌ ಅವರು ಆಧುನಿಕ ವೈದ್ಯ ಪದ್ಧತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ’ ಎಂದು ಕಾಂಗ್ರೆಸ್ ವಕ್ತಾರ ಡಾ.ಸಂಜಯ ಡಾಂಗೆ ಬೇಸರ ವ್ಯಕ್ತಪಡಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಅಲೋಪಥಿ ವೈದ್ಯರುಕೊರೊನಾದಂಥ ಸಂದಿಗ್ಧ ಸಂದರ್ಭದಲ್ಲಿ ಜೀವ ಒತ್ತೆ ಇಟ್ಟು ಸೋಂಕಿತರ ಜೀವರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಕೆಲವು ವೈದ್ಯರು ಜೀವವನ್ನೂ ಕಳೆದುಕೊಂಡಿದ್ದಾರೆ. ಆದರೆ, ರಾಮದೇವ್‌ ಅವರು ಕೋವಿಡ್‌ ಲಸಿಕೆಯ ಬಗ್ಗೆಯೂ ಸಂಶಯ ವ್ಯಕ್ತಪಡಿಸಿ, ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಇವರು ಏನು ಓದಿದ್ದಾರೆ. ಇವರ ಜ್ಞಾನ
ಏನು ಎಂದು ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.

ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ರಾಮದೇವ್‌ ಅವರಹೇಳಿಕೆಯ ಉದ್ದೇಶವಾದರೂ ಏನು.ಇಂಥ ಹೇಳಿಕೆ ವಿರುದ್ಧ ಯಾಕೆ ಕೇಂದ್ರಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಭಾರತದ ಕಾನೂನು ಇವರಿಗೆ ಅನ್ವಯವಾಗುವುದಿಲ್ಲವೇ? ಹೀಗಾಗಿ ರಾಮದೇವ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.