ಹಾವೇರಿ: ಆರೋಗ್ಯ ಇಲಾಖೆ ನೌಕರರು ಒಳಗೊಂಡಂತೆ ಬುಧವಾರ 37 ಮಂದಿಗೆಕೋವಿಡ್-19 ದೃಢಪಟ್ಟಿದ್ದು, ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ ಜಿಲ್ಲೆಯಲ್ಲಿ 8016ಕ್ಕೆ ಏರಿಕೆಯಾಗಿದೆ. 106 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ತಾಲ್ಲೂಕುವಾರು ವಿವರ: ಬ್ಯಾಡಗಿ-3, ಹಾನಗಲ್-7, ಹಾವೇರಿ-9 , ಹಿರೇಕೆರೂರು-8 , ರಾಣೇಬೆನ್ನೂರು-8 ಹಾಗೂ ಸವಣೂರು ತಾಲ್ಲೂಕಿನ-2 ಮಂದಿಗೆ ಸೋಂಕು ದೃಢಪಟ್ಟಿದೆ.
ಸೋಂಕಿನಿಂದ ಗುಣಮುಖರಾಗಿ ಹಾನಗಲ್-20, ಹಾವೇರಿ-36, ಹಿರೇಕೆರೂರು-38, ರಾಣೆಬೆನ್ನೂರು-7, ಸವಣೂರು-1 ಶಿಗ್ಗಾಂವ- 4 ಮಂದಿ ಬಿಡುಗಡೆ ಹೊಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.