ADVERTISEMENT

ಕ್ರಿಕೆಟ್‌: ಜೆಬಿಎಂ ತಂಡ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 16:09 IST
Last Updated 19 ಏಪ್ರಿಲ್ 2021, 16:09 IST
ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ದುಂಡಿಬಸವೇಶ್ವರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಜಾರಿಲಕಮಾಪುರದ ‘ಜೆಬಿಎಂ ಕ್ರಿಕೆಟ್‌ ಕ್ಲಬ್’‌ ಚಾಂಪಿಯನ್‌ ತಂಡವಾಗಿ ಹಾಗೂ ಹಾವೇರಿಯ ‘ಆಟೊ ಶಂಕರ್‌ ತಂಡ’ ರನ್ನರ್ಸ್‌ ಅಪ್‌ ತಂಡವಾಗಿ ಬಹುಮಾನ ಗಳಿಸಿದವು

ಹಾವೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ದುಂಡಿಬಸವೇಶ್ವರ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಜಾರಿಲಕಮಾಪುರದ ಜೆಬಿಎಂ ಕ್ರಿಕೆಟ್‌ ಕ್ಲಬ್‌ ‘ಚಾಂಪಿಯನ್‌ ತಂಡ‌’ವಾಗಿ ಹೊರಹೊಮ್ಮಿತು.

ಚಾಂಪಿಯನ್‌ ತಂಡಕ್ಕೆ ₹33,333 ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು. ಹಾವೇರಿಯ ‘ಆಟೊ ಶಂಕರ್‌ ತಂಡ’ ‘ರನ್ನರ್‌ ಅಪ್’ ಆಗಿ ₹22,222 ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

‘ಆಟೊ ಶಂಕರ್‌’ ತಂಡದ ನಾಯಕ ರಾಮು ಮಾಳಗಿ ಅವರು ‘ಬೆಸ್ಟ್‌ ಬೌಲರ್’‌ ಬಹುಮಾನ ಪಡೆದರು. ಟೌಕಿರ್‌ ಬ್ಯಾಡಗಿ ಅವರು ‘ಬೆಸ್ಟ್‌ ಆಲ್‌ರೌಂಡರ್’ ‌ಹಾಗೂ ದಿಲೀಪ್‌ ಹರವಿ ಅವರು ‘ಬೆಸ್ಟ್‌ ಬ್ಯಾಟ್ಸ್‌ಮನ್’ ಬಹುಮಾನವನ್ನು ತನ್ನದಾಗಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.