ADVERTISEMENT

ಹಲ್ಲೆ: ಅಪರಾಧಿಗಳಿಗೆ 5 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:08 IST
Last Updated 6 ಫೆಬ್ರುವರಿ 2020, 10:08 IST

ರಾಣೆಬೆನ್ನೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಸಹೋದರ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದಹಿರೇಕೆರೂರು ತಾಲ್ಲೂಕಿನ ಹೇಮಪ್ಪ ಬಿ.ಶೆಟ್ಟೆಪ್ಪ ಕೆಂಗಣ್ಣನವರ ಹಾಗೂ ವೀರೇಶ ಹೇಮಪ್ಪ ಕೆಂಗಣ್ಣನವರ ಎಂಬುವವರಿಗೆ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನಾಯಾಧೀಶೆ ಕೆ.ಎಸ್‌. ಜ್ಯೋತಿಶ್ರೀ ಮಂಗಳವಾರ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ₹ 14 ಸಾವಿರ ದಂಡ ವಿಧಿಸಿದ್ದಾರೆ.

ಗಾಯಾಳುಗಳಾದ ಹೊನ್ನಪ್ಪ ಕೆಂಗಣ್ಣನವರ ಹಾಗೂ ಆತನ ಪತ್ನಿ ಹೇಮಾವತಿ ಅವರಿಗೆ ತಲಾ ₹ 30 ಸಾವಿರ ಹಣವನ್ನು ಪರಿಹಾರ ನೀಡುವಂತೆ ಆರೋಪಿತರಿಗೆ ಆದೇಶಿಸಿದ್ದಾರೆ.

ಹೇಮಪ್ಪ ಬಿ.ಶೆಟ್ಟೆಪ್ಪ ಕೆಂಗಣ್ಣವರ ಹಾಗೂ ಹೊನ್ನಪ್ಪ ಕೆಂಗಣ್ಣನವರ ಖಾಸ ಸಹೋದರರು. ಡಿ.12, 2014ರಂದು ಆರೋಪಿತರು ಆಸ್ತಿ ಸಂಬಂಧ ಜಗಳ ಮಾಡಿ ಕಬ್ಬಿಣದ ಸಲಾಕೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಜತೆಗೆ ಜೀವ ಬೆದರಿಕೆ ಹಾಕಿದ್ದರು ಎಂದು ಗಾಯಾಳು ಹೊನ್ನಪ್ಪ ಪೊಲಿಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

ADVERTISEMENT

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸದಾನಂದ ಶಿರೂರ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.