ADVERTISEMENT

ಸೈಬರ್‌ ವಂಚನೆ: ₹60 ಸಾವಿರ ಕಳೆದುಕೊಂಡ ಜಾನಪದ ವಿವಿ ಕುಲಪತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 16:37 IST
Last Updated 8 ಆಗಸ್ಟ್ 2023, 16:37 IST
ಡಾ.ಟಿ.ಎಂ. ಭಾಸ್ಕರ್‌, ಜಾನಪದ ವಿವಿ ಕುಲಪತಿ
ಡಾ.ಟಿ.ಎಂ. ಭಾಸ್ಕರ್‌, ಜಾನಪದ ವಿವಿ ಕುಲಪತಿ   

ಶಿಗ್ಗಾವಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಅವರಿಂದ ಸೈಬರ್ ಖದೀಮರು ₹60 ಸಾವಿರ ದೋಚಿದ್ದಾರೆ. 

ಕುಲಪತಿಯವರ ಮೊಬೈಲ್‌ಗೆ ಕರೆ ಮಾಡಿ, ನಾನು ಧಾರವಾಡದ ಎಸ್‌ಬಿಐ ಬ್ಯಾಂಕ್‌ ಉದ್ಯೋಗಿ ನವೀನಕುಮಾರ್‌ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿಮ್ಮ ಫೋನ್‌ ಪೇಗೆ ಒಂದು ದಿನದ ವಹಿವಾಟು ಮಿತಿ ₹60 ಸಾವಿರವಿದ್ದು, ಇದನ್ನು ಮುಂದುವರಿಸಲು ನಾವು ನಿಮ್ಮ ಫೋನ್‌ ಪೇಗೆ ಒಂದು ಲಿಂಕ್‌ ಕಳುಹಿಸುತ್ತೇವೆ. ‘ಎಸ್‌’ ಎಂದು ಟೈಪ್‌ ಮಾಡಿ ಎಂದು ನಂಬಿಸಿದ್ದಾನೆ. 

ಇದನ್ನು ನಂಬಿದ ಭಾಸ್ಕರ್‌ ಅವರು ಫೋನ್‌ ಪೇ ಆ್ಯಪ್‌ ತೆರೆದು, ಪಾಸ್‌ವರ್ಡ್‌ ಹಾಕಿದ್ದಾರೆ. ಕೂಡಲೇ ₹60,098 ಮೊತ್ತ ಅಕೌಂಟಿನಿಂದ ಡೆಬಿಟ್‌ ಆಗಿದೆ ಎಂದು ಮೆಸೇಜ್‌ ಬಂದಿದೆ. ನಂತರ ಭಾಸ್ಕರ್‌ ಅವರು ಕರೆ ಮಾಡಿದಾಗ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ವಂಚನೆಯಾಗಿರುವುದು ಖಚಿತವಾದ ನಂತರ ಭಾಸ್ಕರ್‌ ಅವರು ಶಿಗ್ಗಾವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.