ರಾಣೆಬೆನ್ನೂರು: ತಾಲ್ಲೂಕಿನ ದೇವರಗುಡ್ಡ ಗ್ರಾಮದಲ್ಲಿ ಗುರುವಾರ ಕುರಿಗಳನ್ನು ಮೇಯಿಸಲು ಹೋದಾಗ ವಿಷಾಹಾರ ಸೇವಿಸಿ 17 ಕುರಿ ಮತ್ತು ಆಡುಗಳು ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಸಾವನ್ನಪ್ಪಿದ ಕುರಿಗಳು ದೇವಗುಡ್ಡದ ಗ್ರಾಮದ ನಿಂಗಪ್ಪ ಯಮನೂರಪ್ಪ ಏಳಕುರಿ ಎಂಬುವರಿಗೆ ಸೇರಿವೆ. ನಗರದ ಪಶು ಆಸ್ಪತ್ರೆಯ ವಿಸ್ತರಣಾಧಿಕಾರಿ ಡಾ.ನೀಲಕಂಠ ಅಂಗಡಿ ಹಾಗೂ ಅವರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುರಿಗಳ ಸಾವಿನ ಬಗ್ಗೆ ತಪಾಸಣೆ ನಡೆಸಿದ್ದಾರೆ. ಇನ್ನು ಉಳಿದ ಕುರಿ ಮತ್ತು ಆಡುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.