ADVERTISEMENT

ರಟ್ಟೀಹಳ್ಳಿ: ಬಾಂದರ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 14:33 IST
Last Updated 10 ಸೆಪ್ಟೆಂಬರ್ 2024, 14:33 IST
ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಮತ್ತು ಬಡಾಸಂಗಾಪುರ ಗ್ರಾಮಸ್ಥರು ತಹಶೀಲ್ದಾರ ಕೆ. ಗುರುಬಸವರಾಜ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು
ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಮತ್ತು ಬಡಾಸಂಗಾಪುರ ಗ್ರಾಮಸ್ಥರು ತಹಶೀಲ್ದಾರ ಕೆ. ಗುರುಬಸವರಾಜ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ರಟ್ಟೀಹಳ್ಳಿ: ತಾಲ್ಲೂಕಿನ ಕುಡುಪಲಿ ಮತ್ತು ಬಡಾಸಂಗಾಪುರ ಗ್ರಾಮಗಳ ಮಧ್ಯ ಕುಮದ್ವತಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯದಾದ ಬಾಂದರ ಕೂಡಲೇ ದುರಸ್ತಿ ಮಾಡಬೇಕು ಎಂದು ತಹಶೀಲ್ದಾರ್‌ ಕೆ. ಗುರುಬಸವರಾಜ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕುಮದ್ವತಿ ನದಿಯ ಪ್ರವಾಹದಿಂದ ಹಾಳಾಗಿರುತ್ತದೆ. ಹೀಗಾಗಿ ಈ ಭಾಗದ ರೈತ ಸಮುದಾಯಕ್ಕೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕೋರಿದ್ದಾರೆ. ಸಮಸ್ಯೆಯನ್ನು ಪರಾಮರ್ಶಿಸಿ ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.

ಕುಡುಪಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್ವರಗೌಡ ಚಿಗ್ಗೌಡ್ರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸನಗೌಡ ಕರೇಗೌಡ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ ತಳವಾರ, ಚಂದ್ರಶೇಖರ ಮುದರಡ್ಡೇರ, ಮಂಜನಗೌಡ ಗುಳದಳ್ಳಿ, ಬಸವರಾಜಪ್ಪ ದೊಡ್ಡಮನಿ, ಕೃಷ್ಣಪ್ಪ ಹೊಸಮನಿ, ಸುರೇಶ ಸವಣೂರ, ಪರಮೇಶಪ್ಪ ತಳವಾರ, ಶಂಕರಗೌಡ ಕುಪ್ಪೇಲೂರು, ಹರೀಶ ಹಲಗೇರಿ, ಶಂಕರಗೌಡ ಪಾಟೀಲ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.