ರಟ್ಟೀಹಳ್ಳಿ: ತಾಲ್ಲೂಕಿನ ಕುಡುಪಲಿ ಗ್ರಾಮದಲ್ಲಿ ಮಂಗಳವಾರ ಹುಚ್ಚನಾಯಿಯೊಂದು ನಾಲ್ವರಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.
ಗಾಯಗೊಂಡ ಬಸಪ್ಪ ಚೌಡಕ್ಕನವರ, ಉಜಪ್ಪ ಉಜ್ಜಪ್ಪನವರ, ಮಾಲತೇಶ ಹರಿಜನ, ಓಂಕಾರ ಬೆಟ್ಟಣ್ಣನವರ ಅವರಿಗೆ ಗ್ರಾಮಸ್ಥರು ಕೂಡಲೇ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಣೆಬೆನ್ನೂರಿನಲ್ಲಿ ಹುಚ್ಚನಾಯಿ ಕಡಿತಕ್ಕೆ ಸೂಕ್ತ ಚುಚ್ಚುಮದ್ದು ಇಲ್ಲ ಎನ್ನುವ ಮಾಹಿತಿ ಮೇರೆಗೆ ಗ್ರಾಮಸ್ಥರು ಈ ವಿಷಯವನ್ನು ಹಿರೇಕೆರೂರ-ರಟ್ಟೀಹಳ್ಳಿ ಶಾಸಕ ಯು.ಬಿ. ಬಣಕಾರ ಅವರ ಗಮನಕ್ಕೆ ತಂದರು. ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಿದ ಶಾಸಕರು, ತಕ್ಷಣ ಹಾವೇರಿಯಿಂದ ರಟ್ಟೀಹಳ್ಳಿಗೆ ಚುಚ್ಚುಮದ್ದು ತರಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.