ತಿಳವಳ್ಳಿ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಶನಿವಾರ 117ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಗ್ರಾಮದ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಸಸಿ ನೆಡುವುದರ ಮೂಲಕ ಆಚರಿಸಲಾಯಿತು..
ತಿಳವಳ್ಳಿ ಶಾಖೆಯ ವ್ಯವಸ್ಥಾಪಕ ಯೋಗಿ.ಎಚ್.ವೈ ಮಾತನಾಡಿ, ಬ್ಯಾಂಕಿನ 117 ವರ್ಷಗಳ ಧ್ಯೇಯದಂತೆ ಶ್ರೇಷ್ಠತೆಗಾಗಿ ಶ್ರಮಿಸಿ ಮತ್ತು ಬಲವಾದ, ಹೆಚ್ಚು ಸಮೃದ್ಧ ಭವಿಷ್ಯವನ್ನು ಸಮಗ್ರವಾಗಿ ನಿರ್ಮಿಸುವುದಾಗಿದೆ. ಈ ಬ್ಯಾಂಕ್ ಆಫ್ ಬರೋಡಾವನ್ನು ಮಹಾರಾಜ ಸಯ್ಯಾಜಿರಾವ್ ಗಾಯಕವಾಡ್ ಅವರು ಸ್ಥಾಪಿಸಿದರು. 1908 ರಲ್ಲಿ ಬರೋಡಾದ ಮಾಂಡವಿಯಲ್ಲಿ ಸ್ಥಾಪಿಸಲಾದ ಮೊದಲ ಶಾಖೆಯಿಂದ, ಬ್ಯಾಂಕ್ ಆಫ್ ಬರೋಡಾ ಇಂದು ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಮೂಡಿ ಬಂದಿದೆ ಎಂದರು.
‘ನಮ್ಮ ಬ್ಯಾಂಕ್ 17 ದೇಶಗಳಲ್ಲಿ ಶಾಖೆ ಹೊಂದಿದೆ. 150 ಮಿಲಿಯನ್ ಗಿಂತಲೂ ಅಧಿಕ ಗ್ರಾಹಕರನ್ನು ಹೊಂದಿದೆ’ ಎಂದರು. ತಿಳವಳ್ಳಿ ಶಾಖೆಯಿಂದ ವಿವಿಧ ಶಾಲೆಗಳಿಗೆ ಊಟದ ತಟ್ಟೆ ದೇಣಿಗೆ ನೀಡಲಾಯಿತು.
ಮುಖ್ಯ ಶಿಕ್ಷಕ ಸೋಮನಾಥ ಬಾಬರ, ಸಿಬ್ಬಂದಿ ಪ್ರಕಾಶ ದೇವರಗುಡ್ಡ, ದೀಪಾ.ಎಲ್, ದಿವ್ಯಾ ಹಾದಿಮನಿ, ಶಿಕ್ಷಕಿ ಭಾರತಿ ಗುಡ್ಡದಮತ್ತಿಹಳ್ಳಿ, ಮಹೇಶ ಗುರು, ವಿಶ್ವನಾಥ ಗೋಡಿ, ರವಿ ಲಮಾಣಿ, ಮಂಜುನಾಥ ಕಮಾಟಿ, ರೇಣುಕಾ ಪತ್ತೇಪುರ, ಮುಸ್ಕಾನ್ ಲಾಲಖಾನವರ, ಸುಭಾಸ ದೊಡ್ಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.