ADVERTISEMENT

ಸಿಂಧಗಿ ಮಠದಲ್ಲಿ ಪುತ್ರನೊಂದಿಗೆ ಈಶ್ವರಪ್ಪ ಹೋಮ, ಹವನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 16:36 IST
Last Updated 13 ಆಗಸ್ಟ್ 2023, 16:36 IST
ಹಾವೇರಿ ನಗರದ ಸಿಂದಗಿ ಮಠದಲ್ಲಿ ಭಾನುವಾರ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ದಂಪತಿ, ಪುತ್ರ ಕೆ.ಈ.ಕಾಂತೇಶ್ ಜೊತೆಗೆ ಶತ ರುದ್ರಾಭಿಷೇಕ, ರುದ್ರ ಹೋಮದಲ್ಲಿ ಭಾಗಿಯಾದರು  -ಪ್ರಜಾವಾಣಿ ಚಿತ್ರ
ಹಾವೇರಿ ನಗರದ ಸಿಂದಗಿ ಮಠದಲ್ಲಿ ಭಾನುವಾರ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ದಂಪತಿ, ಪುತ್ರ ಕೆ.ಈ.ಕಾಂತೇಶ್ ಜೊತೆಗೆ ಶತ ರುದ್ರಾಭಿಷೇಕ, ರುದ್ರ ಹೋಮದಲ್ಲಿ ಭಾಗಿಯಾದರು  -ಪ್ರಜಾವಾಣಿ ಚಿತ್ರ   

ಹಾವೇರಿ: ‘ಲೋಕ ಸಭಾ ಚುನಾವಣೆಗೆ ಅಭ್ಯರ್ಥಿ ಯಾರು ಆಗಬೇಕು ಎನ್ನುವುದನ್ನು ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ಸಮಿತಿ ತೀರ್ಮಾನ ಮಾಡಲಿದೆ. ಅವರ ತೀರ್ಮಾನಕ್ಕೆ ನಾನು ಬದ್ಧ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಸಿಂದಗಿಮಠದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಹಾವೇರಿ ಸಂಸದ ಶಿವಕುಮಾರ್ ಉದಾಸಿಯವರು ಮುಂಬರುವ ಲೋಕ ಸಭಾ ಚುನಾವಣೆಗೆ ನಿಲ್ಲುವುದಿಲ್ಲ‌ ಎಂದು ಹೇಳಿದ್ದಾರೆ. ಹೀಗಾಗಿ ಇಲ್ಲಿ ಪುತ್ರ ಕಾಂತೇಶ್‌ ಸ್ಪರ್ಧೆ ಮಾಡುವುದು ಸೂಕ್ತ ಅನ್ನಿಸಿದೆ. ಈ ಭಾಗದ ಮಾಜಿ ಶಾಸಕರು, ಮಠಾಧೀಶರು, ಕಾರ್ಯಕರ್ತರು ಕೂಡ ಅಪೇಕ್ಷೆ ಪಡುತ್ತಿದ್ದಾರೆ’ ಎಂದರು. 

ಇದಕ್ಕೂ ಮುನ್ನ ಅವರು ಸಿಂದಗಿಮಠದಲ್ಲಿ ಪುತ್ರ ಕೆ.ಈ.ಕಾಂತೇಶ್ ಸಹಿತ ಕುಟುಂಬದವರೊಂದಿಗೆ ರುದ್ರ ಹೋಮ, ಶತರುದ್ರಾಭಿಷೇಕದಲ್ಲಿ ಭಾಗಿಯಾದರು. ‘ಲೋಕ ಕಲ್ಯಾಣಕ್ಕಾಗಿ ರುದ್ರಹೋಮ, ಶತರುದ್ರಾಭಿಷೇಕ ಮಾಡಿಸಲಾಗುತ್ತಿದೆ’ ಎಂದರು. ಆದರೆ ಕಾಂತೇಶ್ ಅವರು ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನೆಲೆಯಲ್ಲಿ ಈ ಹೋಮ ಹವನ ಕಾರ್ಯಕ್ರಮ ನಡೆಸಲಾಗಿದೆ ಎಂಬ ಮಾತು ಕೇಳಿಬಂದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.