ADVERTISEMENT

‘ಗುತ್ತಲ ಬಸ್‌ ನಿಲ್ದಾಣಕ್ಕೆ ಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 13:42 IST
Last Updated 21 ನವೆಂಬರ್ 2020, 13:42 IST
-
-   

ಹಾವೇರಿ:ತಾಲ್ಲೂಕಿನ ಗುತ್ತಲ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ವಯೋವೃದ್ಧರು ಬಿಸಿಲಿನ ತಾಪ ಹಾಗೂ ಮಳೆಯಿಂದ ರಕ್ಷಣೆ ಇಲ್ಲದೇ ಪರದಾಡುವಂತಾಗಿದೆ.

ಗುತ್ತಲ ಪಟ್ಟಣದಿಂದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹಾಗೂ ಗದಗ, ಬಳ್ಳಾರಿ, ದಾವಣಗೆರೆಗೆ ಜನರು ಸಂಚರಿಸುತ್ತಾರೆ. ಆದರೆ, ಬಸ್ ನಿಲ್ದಾಣದ ಆವರಣದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಇರುವುದಿಲ್ಲ. ಆದ್ದರಿಂದ ತಾವುಗಳು ದಯಮಾಡಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಹಾಗೂ ಮಳೆ, ಚಳಿ, ಬಿಸಿಲಿನ ತಾಪ ರಕ್ಷಣೆಗಾಗಿ ಚಾವಣಿ ಮತ್ತು ಉತ್ತಮ ಆಸನಗಳನ್ನು ಅಳವಡಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರಿಗೆ ಜೆಡಿಎಸ್‌ ವತಿಯಿಂದ ಮನವಿ ಸಲ್ಲಿಸಲಾಯಿತು.

ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸಿದ್ದಬಸಪ್ಪ ಯಾದವ, ಜಿಲ್ಲಾ ವಕ್ತಾರ ಮಾಂತೇಶ ಬೇವಿನಹಿಂಡಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ಅಮೀರಜಾನ ಬೇಪಾರಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.