ADVERTISEMENT

ಗುತ್ತಲ: ಅತಿವೃಷ್ಟಿ, ದಾಳಿಂಬೆ ಬೆಳೆ ನಾಶ ಮಾಡಿದ ರೈತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 13:22 IST
Last Updated 4 ಆಗಸ್ಟ್ 2021, 13:22 IST
ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ಅವರು ತನ್ನ ಜಮಿನಿನಲ್ಲಿ ದಾಳಿಂಬೆ ಬೆಳೆಯನ್ನು ಜೆಸಿಬಿಯಿಂದ ನಾಶ ಪಡಿಸಿದರು
ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ಅವರು ತನ್ನ ಜಮಿನಿನಲ್ಲಿ ದಾಳಿಂಬೆ ಬೆಳೆಯನ್ನು ಜೆಸಿಬಿಯಿಂದ ನಾಶ ಪಡಿಸಿದರು   

ಗುತ್ತಲ:ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ತನ್ನ 5 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆಯು ವಿಪರೀತ ಮಳೆ ಸುರಿದ ಹಿನ್ನೆಲೆಯಲ್ಲಿ ರೋಗಕ್ಕೆ ತುತ್ತಾಗಿ ನಾಶವಾಯಿತು.ಹಲವು ಬಾರಿ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬಾರದ ಕಾರಣ ಕೃಷ್ಣರಡ್ಡಿ ಬೆಳೆಯನ್ನು ಬುಧವಾರಜೆಸಿಬಿ ಮೂಲಕ ನಾಶಪಡಿಸಿದರು.

ನಾಲ್ಕು ವರ್ಷದ ಬೆಳೆ ಇದಾಗಿದ್ದು 2020ರಲ್ಲಿ ₹ 3 ಲಕ್ಷ ಆದಾಯ ಬಂದಿತ್ತು. ಈ ಬಾರಿ 3 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿತ್ತು. ಆದರೆ ರೋಗಕ್ಕೆ ತುತ್ತಾಗಿದ್ದರಿಂದ ಬೆಳೆ ನಾಶ ಮಾಡಲಾಯಿತು ಎಂದು ರೈತ ಕೃಷ್ಣರಡ್ಡಿ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT