ADVERTISEMENT

ಬ್ಯಾಡಗಿ | ಕಾಡು ಹಂದಿಗಳಿಂದ ಹಾಳಾದ ಬೆಳೆ; ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ 

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 2:15 IST
Last Updated 31 ಜುಲೈ 2025, 2:15 IST
ಬ್ಯಾಡಗಿ ಪಟ್ಟಣದ ಸುತ್ತಲೂ ಕಾಡು ಹಂದಿಗಳ ದಾಳಿಗೆ ಗೋವಿನಜೋಳ ನಾಶವಾಗಿದ್ದು, ಪರಿಹಾರಕ್ಕೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಎದುರು ರೈತರು ಪ್ರತಿಭಟನೆ ನಡೆಸಿದರು
ಬ್ಯಾಡಗಿ ಪಟ್ಟಣದ ಸುತ್ತಲೂ ಕಾಡು ಹಂದಿಗಳ ದಾಳಿಗೆ ಗೋವಿನಜೋಳ ನಾಶವಾಗಿದ್ದು, ಪರಿಹಾರಕ್ಕೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಎದುರು ರೈತರು ಪ್ರತಿಭಟನೆ ನಡೆಸಿದರು   

ಬ್ಯಾಡಗಿ: ತಾಲ್ಲೂಕಿನ ಅಳಲಗೇರಿ ಹಾಗೂ ಇನ್ನಿತರ ಕಡೆ ಕಾಡು ಹಂದಿಗಳಿಂದ ಗೋವಿನಜೋಳದ ಬೆಳೆ ನಾಶವಾಗಿದ್ದು, ಎಕರೆಗೆ ₹25 ಸಾವಿರ ಪರಿಹಾರ ಕೊಡಿಸುವಂತೆ ಆಗ್ರಹಿಸಿ ರೈತರು ಬುಧವಾರ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಈಶ್ವರ ಮಠದ ಹಾಗೂ ಶಿವಕುಮಾರ ಕಲ್ಲಾಪುರ, ‘ಬ್ಯಾಡಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನುಗಳಲ್ಲಿ ಕಾಡುಹಂದಿಗಳು ದಾಳಿ ನಡೆಸಿ ಬೆಳೆ ನಾಶಪಡಿಸಿವೆ. ಇದನ್ನು ತಡೆಯಲು ಅರಣ್ಯ ಪ್ರದೇಶದ ಸುತ್ತಲೂ ಬೇಲಿ ಅಥವಾ ಕಾಲುವೆ ತೆಗೆಯುವಂತೆ ಕಳೆದ ಎರಡು ವರ್ಷಗಳಿಂದ ಆಗ್ರಹಿಸಲಾಗುತ್ತಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ’ ಎಂದು ದೂರಿದರು.

‘ಹತ್ತಾರು ಸಾವಿರ ಹಣ ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯನ್ನು ಕಾಡು ಪ್ರಾಣಿಗಳು ನಾಶಪಡಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಹಣ ನೀರು ಪಾಲಾಗಿದೆ. ಕೂಡಲೇ ಸರ್ಕಾರ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಇಒ ಕೆ.ಎಂ.ಮಲ್ಲಿಕಾರ್ಜುನ, ವ್ಯವಸ್ಥಾಪಕ ಪ್ರಕಾಶ ಹಿರೇಮಠ ಸಭೆಯಿಂದ ಹೊರ ಬಂದು ರೈತರೊಂದಿಗೆ ಮಾತನಾಡಿ ಸರ್ಕಾರಕ್ಕೆ ವರದಿ ನೀಡುವ ಭರವಸೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.