ADVERTISEMENT

ಶಿಗ್ಗಾವಿ: ಸುಟ್ಟು ಕರಕಲಾದ ಶೆಡ್ಡಿನ ಮನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 14:19 IST
Last Updated 16 ಅಕ್ಟೋಬರ್ 2021, 14:19 IST
ಶಿಗ್ಗಾವಿ ತಾಲ್ಲೂಕಿನ ಚಂದಾಪುರ–ನೀರಲಕಟ್ಟಿ ತಾಂಡದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಕರಕಲಾದ ಮನೆ
ಶಿಗ್ಗಾವಿ ತಾಲ್ಲೂಕಿನ ಚಂದಾಪುರ–ನೀರಲಕಟ್ಟಿ ತಾಂಡದಲ್ಲಿ ಬೆಂಕಿ ಆಕಸ್ಮಿಕದಲ್ಲಿ ಸುಟ್ಟು ಕರಕಲಾದ ಮನೆ   

ಶಿಗ್ಗಾವಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಶೆಡ್ಡಿನ ಮನೆ ಸೇರಿದಂತೆ ಮನೆಯಲ್ಲಿದ್ದ 50 ಗ್ರಾಂ. ಬಂಗಾರ, ₹20 ಸಾವಿರ ನಗದು, ಬಟ್ಟೆಗಳು ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಚಂದಾಪುರ–ನೀರಲಕಟ್ಟಿ ತಾಂಡದಲ್ಲಿ ತಡವಾಗಿ ಗಮನಕ್ಕೆ ಬಂದಿದೆ.

ಪರಮೇಶ ತಿಪ್ಪಣ್ಣ ಲಮಾಣಿ ಎಂಬುವವರಿಗೆ ಸೇರಿದ ಶೆಡ್ಡಿನಮನೆ ಹಾನಿಯಾಗಿದ್ದು, ಅ.14ರಂದು ಮಧ್ಯರಾತ್ರಿ ಆಕಸ್ಮಿಕವಾಗಿ ಹೊತ್ತಿಕೊಂಡಿರುವ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಮನೆಯ ಸದಸ್ಯರು ಎರಡು ದಿನಗಳಿಂದ ಪಕ್ಕದ ಸರ್ಕಾರಿ ಶಾಲೆ ಆವರಣದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.