ADVERTISEMENT

ಗಾನಲಹರಿ ಕಲಾಸಂಸ್ಥೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 15:01 IST
Last Updated 11 ಆಗಸ್ಟ್ 2021, 15:01 IST
ಹಾವೇರಿ ನಗರದ ಗುರುಭವನದಲ್ಲಿ ಬುಧವಾರ ಗಾನಲಹರಿ ಕಲಾ ಸಂಸ್ಥೆಯ ಉದ್ಘಾಟನಾ ಸಮಾರಂಭ ನಡೆಯಿತು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದಾರೆ 
ಹಾವೇರಿ ನಗರದ ಗುರುಭವನದಲ್ಲಿ ಬುಧವಾರ ಗಾನಲಹರಿ ಕಲಾ ಸಂಸ್ಥೆಯ ಉದ್ಘಾಟನಾ ಸಮಾರಂಭ ನಡೆಯಿತು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದಾರೆ    

ಹಾವೇರಿ: ನಗರದ ಗುರುಭವನದಲ್ಲಿ ಗಾನಲಹರಿ ಕಲಾ ಸಂಸ್ಥೆಯ ಉದ್ಘಾಟನೆ ಹಾಗೂ ಉತ್ತರ ಕರ್ನಾಟಕದ ‘ರೊಟ್ಟಿ ತಿಂದ್ರ ನೀ ಆಗತಿ ಗಟ್ಟಿ’ ಎಂಬ ಸಿ.ಡಿ. ಬಿಡುಗಡೆ ಸಮಾರಂಭ ನಡೆಯಿತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ರೊಟ್ಟಿ ಎಂಬುದು ಉತ್ತರ ಕರ್ನಾಟಕದ ವೈಶಿಷ್ಟ್ಯವಾಗಿದ್ದು, ಇದೀಗ ರೊಟ್ಟಿಯನ್ನು ರಾಜ್ಯದಲ್ಲಿ ಎಲ್ಲರೂ ಇಷ್ಟಪಡುತ್ತಾರೆ. ‘ರೊಟ್ಟಿ ತಿಂದ್ರ ಆಗ್ತಾರ ಗಟ್ಟಿ’ ಎಂಬುದು ಅಷ್ಟೇ ಸತ್ಯವಾಗಿದೆ’ ಎಂದು ಹೇಳಿದರು.

ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಉತ್ತರ ಕರ್ನಾಟಕದಲ್ಲಿ ರೊಟ್ಟಿ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಒಂದಾಗಿದೆ. ಪಂಚಮಿ ಹಬ್ಬದಲ್ಲಿ ರೊಟ್ಟಿ ಪಂಚಮಿ ಹಬ್ಬ ಎಂಬುದು ವಿಶಿಷ್ಟವಾಗಿದ್ದು ಇಲ್ಲಿಯ ವಿಶೇಷತೆಯನ್ನು ಸಾರುತ್ತದೆ ಎಂದು ಹೇಳಿದರು.

ADVERTISEMENT

ಸಾಹಿತಿ ಸತೀಶ ಕುಲಕರ್ಣಿ ಮತ್ತು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು.ಗಾನಲಹರಿ ಕಲಾ ಸಂಸ್ಥೆಯ ಕಾರ್ಯದರ್ಶಿ ವೀರನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಎಚ್. ಮಂಜುನಾಥಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಆಶ್ರಯ ಕಮಿಟಿ ಸದಸ್ಯೆ ಲಲಿತಾ ಗುಂಡೇನಹಳ್ಳಿ, ನಗರಸಭೆ ಸದಸ್ಯ ಗಿರೀಶ ತುಪ್ಪದ, ರೈತ ಸೇನಾ ಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ವರುಣಗೌಡ ಪಾಟೀಲ, ಬಸವರಾಜ ಕುರಗೋಡಿ ಇದ್ದರು.

ಕಲಾವಿದರಾದ ಅಮರ ಜವಳಿ, ಕುಮಾರ ಚಂದ್ರಗಿರಿ, ಶಿವಬಸವ ಬಣಕಾರ, ರಾಘವೇಂದ್ರ ಕಬಾಡಿ ಹಾಗೂ ಎಮ್.ಐ. ಅತ್ತರ ಅವರನ್ನು ಗೌರವಿಸಲಾಯಿತು. ನಂತರ ಕಲಾವಿದರಿಂದ ಸಂಗೀತ ಹಾಗೂ ಮಿಮಿಕ್ರಿ ವಸಂತಕುಮಾರ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಸಂತಕುಮಾರ ಕಡತಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.