ADVERTISEMENT

ಹಾವೇರಿ: ಜೋಕಾಲಿ ಆಡುವಾಗ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:16 IST
Last Updated 26 ಜೂನ್ 2020, 16:16 IST

ಹಾವೇರಿ: ತಾಲ್ಲೂಕಿನ ಸಂಗೂರ ಗ್ರಾಮದ ಮನೆಯ ಮುಂಭಾಗ ಚಾವಣಿಗೆ ಸೀರೆ ಕಟ್ಟಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಸುತ್ತಿಕೊಂಡು 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಭಾಗ್ಯಾ ಮಾಲತೇಶ ದ್ಯಾವಣ್ಣನವರ ಎಂಬುವರು ಮೃತಪಟ್ಟ ಬಾಲಕಿ. ಸೀರೆಗೆ ಸಿಲುಕಿ ಉಸಿರು ಕಟ್ಟಿಕೊಂಡ ತಕ್ಷಣ ಬಾಲಕಿಯನ್ನು ಸಂಗೂರಿನ ವೈದ್ಯರ ಬಳಿ ತೋರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ನಗರದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಬಾಲಕಿ ಆ ವೇಳೆಗೆ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.