ಶಿಗ್ಗಾವಿ: ‘ಗ್ರಾಹಕರ– ಬ್ಯಾಂಕಿನ ನಡುವಿನ ಉತ್ತನ ವ್ಯವಹಾರಗಳು ಬ್ಯಾಂಕಿನ ಬೆಳವಣಿಗೆಗೆ ಕಾರಣವಾಗಿದೆ. ಇದರಿಂದ ಬ್ಯಾಂಕ್ ಉತ್ತಮ ಬಾಂಧವ್ಯಗಳ ಕೊಂಡಿಯಾಗಿ ಕೆಲಸ ಮಾಡುತ್ತಿದೆ’ ಎಂದು ರೇಣುಕಾಚಾರ್ಯ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಸ್. ನವಲಗುಂದ ಹೇಳಿದರು.
ಪಟ್ಟಣದಲ್ಲಿ ಈಚೆಗೆ ನಡೆದ ರೇಣುಕಾಚಾರ್ಯ ಬ್ಯಾಂಕಿನ 31ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಳೆದ 31 ವರ್ಷಗಳಿಂದ ಬ್ಯಾಂಕ್ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರುತ್ತಿದೆ. ಅಲ್ಲದೆ ಬ್ಯಾಂಕಿನ ಪದಾಧಿಕಾರಿಗಳು ಸೇವಾ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಿಬ್ಬಂದಿ ಕ್ರೀಯಾಶೀಲತೆ ಗ್ರಾಹಕರರಿಗೆ ಮೆಚ್ಚುಗೆಯಾಗಿದೆ. ಹೊಸ ಯೋಜನೆಗಳ ಮೂಲಕ ಬ್ಯಾಂಕ್ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಸಾಲ ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಆಗ ಮಾತ್ರ ಬ್ಯಾಂಕ್ ಬೆಳೆಯಲು ಸಾಧ್ಯ’ ಎಂದರು.
‘ಈಗಾಗಲೆ ಬ್ಯಾಂಕ್ ಬಂಕಾಪುರ, ಹುಲಗೂರ, ಬೊಮ್ಮನಹಳ್ಳಿ, ಬೆಳಗಾಲಪೇಟೆ, ಸವಣೂರ ಸೇರಿದಂತೆ ಐದು ಹೊಸ ಶಾಖೆಗಳನ್ನು ಒಳಗೊಂಡಿದೆ. ಪ್ರತಿ ಶಾಖೆಗಳು ಸಹ ಉತ್ತಮ ಬೆಳವಣಿಗೆ ಹೊಂದಿವೆ. ಹೀಗಾಗಿ ದುಡಿಯುವ ಬಂಡವಾಳ ಸುಮಾರು ₹66 ಕೋಟಿಗೂ ಹೆಚ್ಚಾಗಿದೆ. ವಾರ್ಷಿಕ ವಹಿವಾಟು ಸುಮಾರು ₹290 ಕೋಟಿಗೂ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ ₹1 ಕೋಟಿಗೂ ಹೆಚ್ಚು ಲಾಭಾಂಶ ಪಡೆದಿದೆ. ಅದಕ್ಕೆ ಬ್ಯಾಂಕಿನ ಕಾರ್ಯ ಬದ್ದತೆ ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ’ ಎಂದು ತಿಳಿಸಿದರು.
ಬ್ಯಾಂಕಿನ ಅಧ್ಯಕ್ಷ ಆರ್.ಎಸ್.ಅರಳೆಲೆಮಠ, ನಿರ್ದೇಶಕರಾದ ಫಕ್ಕೀರಜ್ಜ ಯಲಿಗಾರ, ಬಸವರಾಜ ವಾಲಿಶೆಟ್ಟರ, ನಾಗರಾಜ ಬ್ರಹ್ಮಾವರ, ವೀರಣ್ಣ ಬಡ್ಡಿ, ಕಲ್ಲಪ್ಪ ಹೆಸರೂರ, ವಿನಾಯಕ ರಾಯ್ಕರ, ಷಣ್ಮುಖಪ್ಪ ಕಡೇಮನಿ, ಮಾಲತೇಶ ಕಂಕನವಾಡ, ಶಿವಪ್ರಕಾಶ ಹಿರೇಮಠ, ವಿಜಯಲಕ್ಷ್ಮಿ ಬೇವಿನಮರದ, ಜಯಶ್ರೀವರ್ಷ ಯಲಿಗಾರ, ರೂಪಾದೇವಿ ಲಮಾಣಿ, ಬಸವರಾಜ ಚಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.