ADVERTISEMENT

ಗ್ರಾ.ಪಂ. ಉಪಚುನಾವಣೆ ಫೆ.25ಕ್ಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 14:08 IST
Last Updated 8 ಫೆಬ್ರುವರಿ 2023, 14:08 IST
ರಘುನಂದನಮೂರ್ತಿ, ಜಿಲ್ಲಾಧಿಕಾರಿ
ರಘುನಂದನಮೂರ್ತಿ, ಜಿಲ್ಲಾಧಿಕಾರಿ   

ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಬ್ಯಾಡಗಿ ತಾಲ್ಲೂಕಿನ 12-ಬಿಸಲಹಳ್ಳಿ ಹಾಗೂ ಸವಣೂರು ತಾಲ್ಲೂಕಿನ 20-ಹತ್ತಿಮತ್ತೂರು ಹಾಗೂ 2-ಚಿಲ್ಲೂರಬಡ್ನಿ ಸೇರಿ ಮೂರು ಗ್ರಾಮ ಪಂಚಾಯಿತಿಗಳ ಮೂರು ಕ್ಷೇತ್ರಗಳಲ್ಲಿ ತೆರವಾದ ಸದಸ್ಯರ ಸ್ಥಾನಕ್ಕೆ ಉಪಚುನಾವಣೆಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಫೆ.14 ಮಂಗಳವಾರ ಕೊನೆಯ ದಿನ, ಫೆ.15 ಬುಧವಾರ ನಾಮಪತ್ರಗಳ ಪರಿಶೀಲನೆ, ಫೆ.17 ರಂದು ಶುಕ್ರವಾರ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ, ಮತದಾನ ಅವಶ್ಯವಿದ್ದರೆ ಫೆ.25ರಂದು ಶನಿವಾರ ಬೆಳಿಗ್ಗೆ 7 ರಿಂದ ಸಂಜೆ 5ರವರೆಗ ಮತದಾನ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ಫೆ.27ರಂದು ಸೋಮವಾರ ಬೆಳಿಗ್ಗೆ 7 ರಿಂದ ಸಂಜೆ 5ರವರೆಗ ಮತದಾನ ನಡೆಸಲಾಗುವುದು. ಮತ ಎಣಿಕೆ ಫೆ.28 ರಂದು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಜರುಗಲಿದೆ.

ಚುನಾವಣಾ ಕಾರ್ಯಕ್ಕೆ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಿ ಸೂಕ್ತ ತರಬೇತಿ ನೀಡಲಾಗಿದೆ. ಈ ಚುನಾವಣೆ ಪಕ್ಷರಹಿತ ಚುನಾವಣೆಯಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಗಳನ್ನು ಮುದ್ರಿಸಲಾಗುತ್ತಿದ್ದು, ಸಾರ್ವಜನಿಕರ ಪರಿಶೀಲನೆಗೆ ಇಟ್ಟು ಅಂತಿಮಗೊಳಿಸಲಾಗಿದೆ.

ADVERTISEMENT

ಗ್ರಾಮ ಪಂಚಾಯಿತಿ ಉಪ ಚುನಾವಣೆಯ ಪ್ರಯುಕ್ತ ಮಾದರಿ ನೀತಿಸಂಹಿತೆಯು ಚುನಾವಣೆ ನಡೆಯುವ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಫೆ.8ರಿಂದ ಫೆ.28ರ ಸಂಜೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ. ಈ ಮಾದರಿ ನೀತಿಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆ ಮಹಾನಗರಪಾಲಿಕೆಗೆಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.