ADVERTISEMENT

ನೀಟ್‌ ಪರೀಕ್ಷೆ ಎದುರಿಸಲು ಮಾರ್ಗದರ್ಶನ

ಶ್ರೇಯಾ ಸಿರಿ ಎಜುಕೇಷನ್‌ ಇನ್‌ಸ್ಟಿಟ್ಯೂಟ್‌ನ ಚೇರ್ಮನ್‌ ಕೆ.ಎಸ್‌.ರಾವ್

​ಪ್ರಜಾವಾಣಿ ವಾರ್ತೆ
Published 14 ಮೇ 2022, 14:14 IST
Last Updated 14 ಮೇ 2022, 14:14 IST
ಕೆ.ಎಸ್‌.ರಾವ್‌
ಕೆ.ಎಸ್‌.ರಾವ್‌   

ಹಾವೇರಿ: ‘ಗ್ರಾಮೀಣ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಸೀಟುಗಳನ್ನು ಪಡೆಯಲು ಅನುಕೂಲವಾಗುವಂತೆ, ಪಿಯು ವಿಜ್ಞಾನ ಶಿಕ್ಷಣದ ಜೊತೆ ಸಿಇಟಿ ಮತ್ತು ನೀಟ್‌ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಕೋಚಿಂಗ್‌ ನೀಡುತ್ತೇವೆ’ ಎಂದು ಶ್ರೇಯಾ ಸಿರಿ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್‌ನ ಚೇರ್ಮನ್‌ ಕೆ.ಎಸ್‌.ರಾವ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಿಇಟಿ, ನೀಟ್‌ ಪರೀಕ್ಷೆಗಳಿಗೆ ಕೋಚಿಂಗ್‌ ಪಡೆಯಲು ಹಾವೇರಿ ವಿದ್ಯಾರ್ಥಿಗಳು ಹುಬ್ಬಳ್ಳಿ, ಮಂಗಳೂರು, ಬೆಂಗಳೂರಿಗೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಿ ಹಾವೇರಿ ನಗರದಲ್ಲೇ ಕೋಚಿಂಗ್‌ ನೀಡಲು ನಿರ್ಧರಿಸಿದ್ದೇವೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗಗಳನ್ನು ಈ ವರ್ಷದಿಂದ ಆರಂಭಿಸುತ್ತಿದ್ದೇವೆ ಎಂದರು.

ಆಂಧ್ರಪ್ರದೇಶದಲ್ಲಿ 6ನೇ ತರಗತಿಯಿಂದಲೇ ವಿದ್ಯಾರ್ಥಿಗಳು ಮೆಡಿಕಲ್‌/ ಎಂಜಿನಿಯರಿಂಗ್‌ಗಳಲ್ಲಿ ಯಾವ ಕೋರ್ಸ್‌ ಓದಬೇಕು ಎಂಬ ಬಗ್ಗೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಂತೆ, ಪಿಯು ಹಂತದಲ್ಲಿ ಮೆಡಿಕಲ್‌ಗೆ ಹೋಗುವವರು ‘ಪಿಸಿಬಿ’ ಯನ್ನು(ಭೌತವಿಜ್ಞಾನ, ರಸಾಯನವಿಜ್ಞಾನ, ಜೀವಶಾಸ್ತ್ರ), ಎಂಜಿನಿಯರಿಂಗ್‌ಗೆ ಹೋಗುವವರು ‘ಪಿಸಿಎಂ’ಗೆ (ಗಣಿತ) ಹೆಚ್ಚು ಒತ್ತು ಕೊಟ್ಟು ಓದುತ್ತಾರೆ. ಅದೇ ಮಾದರಿಯಲ್ಲೇ ನಾವು ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತೇವೆ ಎಂದರು.

ADVERTISEMENT

ನೀಟ್‌ ರಿಪೀಟರ್ಸ್‌ಗೆ ಲಾಂಗ್‌ ಟರ್ಮ್‌ ಮತ್ತು ಶಾರ್ಟ್‌ ಟರ್ಮ್‌ ಕೋರ್ಸ್‌ಗಳನ್ನು ಆರಂಭಿಸುತ್ತೇವೆ. ಜತೆಗೆ ಕೆಲವು ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 6ನೇ ತರಗತಿಯಿಂದಲೇ ಮೆಡಿಕಲ್‌ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪೂರಕವಾದ ವ್ಯಾಸಂಗವನ್ನು ರೂಢಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಶ್ರೀರಾಮ್‌, ಉಪನ್ಯಾಸಕರಾದ ಅರ್ಚನಾ ಎಸ್‌, ಬಾಲಯ್ಯ ಹಾಗೂ ಬಾಬುಜಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.