ADVERTISEMENT

ಕ್ರೀಡಾಭಿಮಾನಿಗಳ ಸಾವುನೋವು ಕಳವಳಕಾರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:25 IST
Last Updated 5 ಜೂನ್ 2025, 14:25 IST
ರಾಜಶೇಖರ ಕಟ್ಟೆಗೌಡ್ರ
ರಾಜಶೇಖರ ಕಟ್ಟೆಗೌಡ್ರ   

ಹಾನಗಲ್: ‘ಬೆಂಗಳೂರಿನಲ್ಲಿ ಬುಧವಾರ ಕಾಲ್ತುಳಿತಕ್ಕೆ 11 ಕ್ರೀಡಾಭಿಮಾನಿಗಳು ಸಾವಿಗೀಡಾಗಿ, ಹಲವರು ಗಾಯಗೊಂಡ ದುರಂತದ ಘಟನೆಗೆ ರಾಜ್ಯ ಸರ್ಕಾರದ ನಿರ್ಲಕ್ಷವೇ ಪ್ರಮುಖ ಕಾರಣ’ ಎಂದು ಬಿಜೆಪಿ ಹಾವೇರಿ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಶೇಖರ ಕಟ್ಟೆಗೌಡ್ರ ಆಪಾದಿಸಿದ್ದಾರೆ.

ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂಭ್ರಮದ ಸಮಯದಲ್ಲಿ ರಾಜ್ಯದಲ್ಲಿ ಸೂತಕ ಆವರಿಸಿದೆ. ಕ್ರೀಡಾಭಿಮಾನಿಗಳ ಸಾವು, ನೋವು ಕಳವಳಕಾರಿ. ದುರಂತದ ಹೊಣೆ ಹೊತ್ತು ರಾಜ್ಯ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜನದಟ್ಟಣೆಗೆ ತಕ್ಕಂತೆ ಸ್ಥಳಾವಕಾಶ, ಸೂಕ್ತ ನಿರ್ವಹಣೆ, ಪೊಲೀಸ್ ಭದ್ರತೆ ಮತ್ತು ತುರ್ತು ಸೇವೆಗಳ ನಿಯೋಜನೆಗೆ ನಿರ್ಲಕ್ಷ್ಯ ವಹಿಸಲಾಗಿದೆ. ಪ್ರಚಾರದ ಗೀಳಿಗೆ ಬಿದ್ದ ರಾಜ್ಯ ಸರ್ಕಾರ ಅಮಾಯಕ ಕ್ರೀಡಾ ಪ್ರೇಮಿಗಳ ದುರ್ಮರಣಕ್ಕೆ ಕಾರಣವಾಗಿದೆ ಎಂದು ಕಟ್ಟೆಗೌಡ್ರ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.