ADVERTISEMENT

ವಿರಾಟ್‌ ಹಿಂದೂ ಗಣೇಶ ಪ್ರತಿಷ್ಠಾಪನೆಗೆ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 3:02 IST
Last Updated 19 ಆಗಸ್ಟ್ 2025, 3:02 IST
ಹಾನಗಲ್‌ನಲ್ಲಿ ವಿರಾಟ್ ಹಿಂದೂ ಮಹಾಗಣಪತಿ ಪ್ರತಿಷ್ಠಾನೆಗಾಗಿ ಸೋಮವಾರ ಪೂಜಾ ಕಾರ್ಯದ ಮೂಲಕ ಚಾಲನೆ ನೀಡಲಾಯಿತು.
ಹಾನಗಲ್‌ನಲ್ಲಿ ವಿರಾಟ್ ಹಿಂದೂ ಮಹಾಗಣಪತಿ ಪ್ರತಿಷ್ಠಾನೆಗಾಗಿ ಸೋಮವಾರ ಪೂಜಾ ಕಾರ್ಯದ ಮೂಲಕ ಚಾಲನೆ ನೀಡಲಾಯಿತು.   

ಹಾನಗಲ್: ಇಲ್ಲಿನ ತಾರಕೇಶ್ವರ ದೇವಸ್ಥಾನ ಮುಂಭಾಗದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗಾಗಿ ಸೋಮವಾರ ಭಗವಧ್ವಜ ಧ್ವಜಾರೋಹಣ ನೆರವೇರಿಸಿದ ವಿರಾಟ್ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಸಮಿತಿಯಿಂದ ಭಾರತ ಮಾತೆ ಮತ್ತು ಗಣೇಶನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರತಿಷ್ಠಾಪನಾ ಸಮಿತಿಯ ರವಿಚಂದ್ರ ಪುರೋಹಿತ, ಆ.27 ರಂದು ಸಂಜೆ ಗೋಧೂಳಿ ಮುಹೂರ್ತದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದ್ದು, 21 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ.4 ರಂದು ಬೆಳಿಗ್ಗೆ ಸಹಸ್ರ ಮೋದಕ ಗಣಹೋಮ ನಡೆಯಲಿದೆ. ಸೆ.10 ರಂದು ಧರ್ಮಸಭೆ ಆಯೋಜಿಸಲಾಗಿದೆ. ವಿಶ್ವಹಿಂದೂ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಜೀ ಮತ್ತು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಸೆ.11 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಚಲನಚಿತ್ರ ಗಾಯಕಿ ಶಮಿತಾ ಮಲ್ನಾಡ್ ತಂಡದವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿವೆ. ಚಂದನ ಟಿವಿಯ ಕಲಾವಿದೆ ಸಂಧ್ಯಾ ಗಿರೀಶ್ ಅವರಿಂದ ಸುಗಮ ಸಂಗೀತ ಪ್ರಸ್ತುತಗೊಳ್ಳಲಿದೆ. ಸೆ. 14 ರಂದು ಸಾಮೂಹಿಕ ಅನ್ನ ಸಂತರ್ಪಣೆ ನಡೆಯಲಿದೆ. ಸೆ.16 ರಂದು ಮಧ್ಯಾಹ್ನ ವಿವಿಧ ಕಲಾ ತಂಡಗಳು ಮತ್ತು ಮಂಗಲ ವಾದ್ಯಗಳೊಂದಿಗೆ ಗಣೇಶ ವಿಸರ್ಜನೆ ನೆರವೇರಲಿದೆ ಎಂದರು.

ಹಿರಿಯ ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಪ್ರಮುಖರಾದ ಸಿದ್ದಲಿಂಗಣ್ಣ ಕಮಡೊಳ್ಳಿ, ಕಲ್ಯಾಣಕುಮಾರ ಶೆಟ್ಟರ, ರಾಜು ಗೌಳಿ, ಗಣೇಶ ಮೂಡ್ಲಿಯವರ, ರಾಮು ಯಳ್ಳೂರ, ಜಗದೀಶ ಸಿಂಧೂರ, ಬಾಳಣ್ಣ ಸುಗಂಧಿ, ಸಂಜು ಬೇದ್ರೆ, ಯಲ್ಲಪ್ಪ ಶೇರಖಾನಿ, ಶ್ರೀನಿವಾಸ ಬಂಕನಾಳ, ಕೃಷ್ಣಾ ಹುನಗನಹಳ್ಳಿ, ರವಿ ಪುರದ ಹಾಗೂ ಸಮಿತಿಯ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.