ADVERTISEMENT

ಜೂನ್‌ 19ರವರೆಗೆ ಸ್ವಚ್ಛತಾ ಪಾಕ್ಷಿಕ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:34 IST
Last Updated 6 ಜೂನ್ 2020, 15:34 IST
ರಮೇಶ ದೇಸಾಯಿ, ಸಿಇಒ, ಜಿಲ್ಲಾ ಪಂಚಾಯ್ತಿ 
ರಮೇಶ ದೇಸಾಯಿ, ಸಿಇಒ, ಜಿಲ್ಲಾ ಪಂಚಾಯ್ತಿ    

ಹಾವೇರಿ: ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದ್ರವತ್ಯಾಜ್ಯ ನಿರ್ವಹಣೆಯ ಕುರಿತು ವ್ಯಾಪಕವಾದ ಜಾಗೃತಿ ಮೂಡಿಸಲು ಹಾಗೂ ಗ್ರಾಮಗಳಲ್ಲಿ ದ್ರವತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ಉತ್ತೇಜಿಸುವ ಸಲುವಾಗಿ ಜೂನ್‌ 5ರಿಂದ ಜೂನ್‌ 19ರವರೆಗೆ ‘ಸ್ವಚ್ಛ ಗ್ರಾಮ- ಸ್ವಚ್ಛ ಪರಿಸರ’ ಎಂಬ ಹೆಸರಿನಡಿ ಸ್ವಚ್ಛತಾ ಪಾಕ್ಷಿಕ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ರಮೇಶ ದೇಸಾಯಿ ತಿಳಿಸಿದ್ದಾರೆ.

ಈ ಕುರಿತು ಜಾಗೃತಿ ಮೂಡಿಸಲು ಸ್ಪರ್ಧೆಗಾಗಿ ಕಿರುಚಿತ್ರ ನಿರ್ಮಾಣ, ಯಶೋಗಾಥೆ (ಲೇಖನ) ಹಾಗೂ ಉತ್ತಮ ಮಾದರಿಗಳನ್ನು ಬಹುಮಾನಕ್ಕೆ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ₹15 ಸಾವಿರ, ₹10 ಸಾವಿರ ಹಾಗೂ ₹5 ಸಾವಿರವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ನೀಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಗೆ ನಾಮನಿರ್ದೇಶನ ಮಾಡಲಾಗುವುದು. ರಾಜ್ಯ ಮಟ್ಟದಲ್ಲಿ ಈ ಮೂರು ವಿಭಾಗಕ್ಕೆ ಕ್ರಮವಾಗಿ ₹50 ಸಾವಿರ, ₹40 ಸಾವಿರ ಹಾಗೂ ₹30 ಸಾವಿರ ಪುರಸ್ಕಾರದ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಜೂನ್ 5ರಿಂದ ಅರ್ಜಿ ಪಡೆಯಬಹುದು. ಜೂನ್ 20ರೊಳಗೆ ಕಿರುಚಿತ್ರ ಸಿ.ಡಿ, ಸೂಕ್ತ ಛಾಯಾಚಿತ್ರದೊಂದಿಗೆ ಯಶೋಗಾಥೆ ( ಲೇಖನ) ಮತ್ತು ವಿನೂತನವಾಗಿ ದ್ರವ ತ್ಯಾಜ್ಯ ನಿರ್ವಹಣೆ ಮಾದರಿಗಳೊಂದಿಗೆ ನಿಗಧಿತ ಅರ್ಜಿ ಭರ್ತಿ ಮಾಡಿ ಖುದ್ದಾಗಿ ಅಥವಾ ಹಾವೇರಿ ಜಿಲ್ಲಾ ಪಂಚಾಯಿತಿ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು. ಸ್ವೀಕೃತವಾದ ಅರ್ಜಿಗಳನ್ನು ಜೂನ್ 28ರೊಳಗೆ ಮೌಲ್ಯಮಾಪನ ಮಾಡಿ ಜೂನ್ 30ರಂದು ಆಯ್ಕೆಯಾದವರನ್ನು ಘೋಷಣೆ ಮಾಡಲಾಗುವುದು. ಜುಲೈ 6ರೊಳಗಾಗಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಕಿರುಚಿತ್ರ, ಲೇಖನ ಹಾಗೂ ಮಾದರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯಾಲಯ, ದೇವಗಿರಿ-581110, ಇ–ಮೇಲ್‌ ವಿಳಾಸ: cleangreehaveri@gmail.com. ಮಾಹಿತಿಗಾಗಿ 08375-249031 ಸಂಪರ್ಕಿಸಲು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.