ADVERTISEMENT

ಪ್ರತಿಕೃತಿ ದಹಿಸಿ ಬೇಡ ಜಂಗಮರ ಪ್ರತಿಭಟನೆ

ಸಚಿವ ಗೋವಿಂದ ಕಾರಜೋಳ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:10 IST
Last Updated 13 ಮಾರ್ಚ್ 2020, 14:10 IST
ಹಾವೇರಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಬೇಡ ಜಂಗಮ ಸಮುದಾಯದವರು ಸಚಿವ ಗೋವಿಂದ ಕಾರಜೋಳ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು
ಹಾವೇರಿ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಬೇಡ ಜಂಗಮ ಸಮುದಾಯದವರು ಸಚಿವ ಗೋವಿಂದ ಕಾರಜೋಳ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು   

ಹಾವೇರಿ: ಬೇಡ ಜಂಗಮರ ಕುರಿತು ಸದನದಲ್ಲಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನಗರದ ಮೈಲಾರ ಮಹಾದೇವಪ್ಪನವರವೃತ್ತದಲ್ಲಿ ಸಚಿವರ ಪ್ರತಿಕೃತಿ ದಹಿಸಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಮುದಾಯದ ಮುಖಂಡಎಸ್.ಡಿ.ಹಿರೇಮಠ ಮಾತನಾಡಿ, ಬೇಡ ಜಂಗಮರು ಕೇವಲ ಮೂರು ಜಿಲ್ಲೆಗಳಲ್ಲಿದ್ದಾರೆ. ರಾಜ್ಯದ ಉಳಿದ ಯಾವುದೇ ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಅವರ ಆಹಾರ ಪದ್ಧತಿಯನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯ 1995 ಜ.18ರ ಸುತ್ತೋಲೆ ಸಂವಿಧಾನ, ಕಾನೂನು ಬಾಹಿರಎಂದು ತೀರ್ಪು ನೀಡಿದೆ ಎಂದರು.

ಬೇಡ ಜಂಗಮ ಜಾತಿ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಗೊತ್ತಿಲ್ಲದಿದ್ದರೆ, ಅವರನ್ನು ಆ ಖಾತೆಯಲ್ಲಿ ಮುಂದುವರೆಸಬಾರದು. ಇಂತಹ ಸಚಿವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಇವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.

ADVERTISEMENT

ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಆದೇಶ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಚಲಿತದಲ್ಲಿರುವ ಸುತ್ತೋಲೆ ಹಾಗೂ ಕರ್ನಾಟಕ ಗೆಜೆಟಿಯರ್ ವರದಿಯನ್ನು ಆಧರಿಸಿ, ನ್ಯಾಯಾಲಯದತೀರ್ಪನ್ನು ಗೌರವಿಸಿ ಬೇಡ ಜಂಗಮಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ನೀಡಿರುವ ಬೆಳಗಾವಿ ತಾಲ್ಲೂಕಿನ ಗ್ರೇಡ್-2 ತಹಶೀಲ್ದಾರ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಅವರ ಅಮಾನತು ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಗುರು ಹಿರೇಮಠ ಮಾತನಾಡಿ, ರಾಜ್ಯದಲ್ಲಿರುವ ಜಂಗಮರು ಪಂಚ ಪೀಠಗಳ ಅನುಯಾಯಿಗಳು ಅವರು ಶುದ್ಧ ಸಸ್ಯಾಹಾರಿಗಳು ಇವರೆಲ್ಲ ಬೇಡ ಜಂಗಮರುಎಂದು ರಾಜ್ಯ ಸರ್ಕಾರಕ್ಕೆ ಸೂರ್ಯನಾಥ ಕಾಮತ ಸಮಿತಿ ವರದಿಯನ್ನು ನೀಡಿದ್ದಾರೆ ಎಂದರು.

ಬಿ.ಎಸ್.ಹಿರೇಮಠ, ನಾಗರಾಜ ಹನುಗೋಡಿಮಠ ಮಾತನಾಡಿದರು. ಎಸ್.ಎಸ್.ಮಠದ, ಮಂಜುನಾಥ ಮಠಪತಿ, ಶಿವಾನಂದ ಹಿರೇಮಠ, ಗುರುನಾಥಯ್ಯ ಮಳ್ಳೂರಮಠ, ರಾಜು ಕಲ್ಯಾಣಮಠ, ಬಸಯ್ಯ ಹಿರೇಮಠ, ರಾಚಯ್ಯ ಪಾಟೀಲ, ಮುತ್ತಯ್ಯ ರಿತ್ತಿಮಠ, ಎ.ಕೆ.ಅದ್ವಾನಿಮಠ, ಚಂದ್ರಶೇಕರಯ್ಯ ಗುಡೂರಮಠ, ಎನ್.ಎಂ.ಹಿರೇಮಠ, ಸಿ.ಪಿ.ಸುತ್ತೂರಮಠ, ಬಸವರಾಜಯ್ಯ ಹಿರೇಮಠ, ಗುರುಶಾಂತಯ್ಯ ಹಿರೇಮಠ, ಕರಬಸಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.