ಹಾವೇರಿ: ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಸವಿ ನೆನಪಿನಲ್ಲಿ ರಾಜ್ಯದಾದ್ಯಂತ ಕೈಗೊಂಡಿರುವ ‘ಭೀಮ ಹೆಜ್ಜೆ–100’ ಸಂಭ್ರಮದ ರಥಕ್ಕೆ ನಗರದಲ್ಲಿ ಶನಿವಾರ ಅದ್ಧೂರಿ ಸ್ವಾಗತ ಕೋರಲಾಯಿತು.
ಅಂಬೇಡ್ಕರ್ ಅವರು 1925ರ ಏಪ್ರಿಲ್ 11ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಭೇಟಿ ನೀಡಿದ್ದರು. ಇದರ ನೆನಪಿಗಾಗಿ ಇದೇ ಏಪ್ರಿಲ್ 11ರಂದು ಬಿಜೆಪಿ ವತಿಯಿಂದ ಬೆಂಗಳೂರಿನಿಂದ ನಿಪ್ಪಾಣಿಯವರೆಗೆ ದ್ವಿಚಕ್ರ ವಾಹನ ರ‍್ಯಾಲಿ ಸಮೇತ ರಥಯಾತ್ರೆ ಆರಂಭಿಸಲಾಗಿದೆ.
ಹಾವೇರಿ ನಗರಕ್ಕೆ ಮಧ್ಯಾಹ್ನ ಆಗಮಿಸಿದ ರಥಯಾತ್ರೆಯನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು. ನಂತರ, ಕೆಇಬಿ ವೃತ್ತದಿಂದ ಪುರಸಿದ್ಧೇಶ್ವರ ದೇವಸ್ಥಾನ, ಎಂ.ಜಿ. ರಸ್ತೆ, ಮೇಲಿನ ಪೇಟೆ, ಸುಭಾಷ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ರಥಯಾತ್ರೆ ಸಾಗಿತು. ರಥಯಾತ್ರೆಯುದ್ದಕ್ಕೂ ಬೈಕ್‌ನಲ್ಲಿ ಸಾಗಿದ ಕಾರ್ಯಕರ್ತರು, ಯಾತ್ರೆಗೆ ಜೈಕಾರ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.