ರಾಣೆಬೆನ್ನೂರು (ಹಾವೇರಿ): ಇಲ್ಲಿಯ ನಾಡಿಗೇರ ಓಣಿಯಲ್ಲಿರುವ ಪಿ.ಟಿ. ಕಾಕಿ ಅವರ ಮನೆಯಲ್ಲಿ ಬುಧವಾರ ಅಡಗಿ ಕುಳಿತಿದ್ದ ಚಿರತೆ ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಅರವಳಿಕೆ ಚುಚ್ಚು ಮದ್ದು ನೀಡಿ, ಚಿರತೆ ಸೆರೆ ಹಿಡಿದರು.
ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಯ ಗಡಿಭಾಗದಲ್ಲಿ ಮಂಗಳವಾರ ರಾತ್ರಿಯಿಂದ 20ಕ್ಕೂ ಹೆಚ್ಚು ಚಿರತೆಗಳು ಓಡಾಡಿದ ಮಾಹಿತಿ ಹರಿದಾಡುತ್ತಿತ್ತು. ‘ಇವುಗಳಲ್ಲಿ ಒಂದು ಮನೆಯಲ್ಲಿ ಅಡಗಿ ಕೂತಿರಬಹುದು. ಅರಣ್ಯ ಇಲಾಖೆಯವರು ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆಹಿಡಿದರು’ ಎಂದು ಸ್ಥಳೀಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.