ಹಿರೇಕೆರೂರ: ಗುರಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದು ಪ್ರಧಾನಮಂತ್ರಿ ಪೋಷಣ ಶಕ್ತಿ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್.ಜಾಡರ ಹೇಳಿದರು.
ತಾಲ್ಲೂಕಿನ ಚಿನ್ನಮುಳಗುಂದ ಗ್ರಾಮದ ಕೆ.ಬಿ.ಪಾಟೀಲ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಈಚೆಗೆ ವಯೋನಿವೃತ್ತಿ ಹೊಂದಿದ ವಿ.ಎಸ್.ಕೊಪ್ಪದ ಅವರಿಗೆ ಮಾತಾ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಹಾಗೂ ಗ್ರಾಮಸ್ಥರಿಂದ ಗುರುವಾರ ಏರ್ಪಡಿಸಿದ್ದ ಬೀಳ್ಕೊಡುಗೆಯಲ್ಲಿ ಮಾತನಾಡಿದರು.
ಮುಖ್ಯ ಶಿಕ್ಷಕ ಎನ್.ಎಂ.ಖಂಡೆಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಆರಂಭದಿಂದಲೂ ಪ್ರಗತಿಗೆ ಶ್ರಮಿಸಿದ ಮುಖ್ಯಶಿಕ್ಷಕ ವಿ.ಎಸ್.ಕೊಪ್ಪದ ಅವರ ಸೇವೆ ಅನನ್ಯ. ಅವರ ಅವಧಿಯಲ್ಲಿ ಶಾಲೆ ಅತ್ಯುತ್ತಮ ಬೆಳವಣೆಗೆ ಕಂಡಿದ್ದು ಅವರಿಂದ ಶಿಕ್ಷಣ ಪಡೆದ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಶಿಕ್ಷಕ ಆರ್.ಎಚ್.ಮುದಕಣ್ಣನವರ ಸ್ವಾಗತಿಸಿ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಗಾಳೆವ್ವರ, ಉಪಾಧ್ಯಕ್ಷ ತಿರಕಪ್ಪ ಗಂಗಮ್ಮನವರ, ಸದಸ್ಯರಾದ ಸಂತೋಷ ಗಾಳೆವ್ವರ, ನಾಗಪ್ಪ ಕಡಕೋಳ, ಗ್ರಾಮ ಪಂ ಮಾಜಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಗುಡ್ಡಪ್ಪ ಛಲವಾದಿ, ಸಿಬ್ಬಂದಿ ವಿ.ಆರ್.ಪಾಟೀಲ, ಐ.ಎಸ್.ಕಲಾದಗಿ, ಅರುಣಕುಮಾರ ಸ್ಥಾವರದ, ಎಸ್.ಬಿ.ಮುಳಗುಂದ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.