ಹಿರೆಕೇರೂರು: ನಿಂತ ನೀರು ಸೊಳ್ಳೆಗಳ ತವರೂರು ಮುಂಗಾರು ಪ್ರಾರಂಭವಾಗಿದೆ. ವಾರದಲ್ಲಿ ಎರಡು ಬಾರಿ ಮನೆ ಬಳಕೆಯ ನೀರನ್ನು ಸ್ವಚ್ಛಗೊಳಿಸಿ ಶುದ್ಧ ಮಾಡಿ ಇಟ್ಟುಕೊಂಡರೆ ಡೆಂಗಿ ನಿಯಂತ್ರಣ ನಮ್ಮಿಂದಲೇ ಸಾಧ್ಯ, ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪ್ರಭು ಕೆಂಚಳ್ಳೇರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೇಳಿದರು.
ತಾಲ್ಲೂಕಿನ ಹೊಸ ವೀರಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ಆಡಳಿತ ವೈದ್ಯಾಧಿಕಾರಿ ಸುನಿತಾ ಮಾರೇರ ಡೆಂಗಿ ರೋಗದ ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ಸಾರ್ವಜನಿಕರಿಗೆ ವಿವರವಾಗಿ ತಿಳಿಸಿದರು.
ಎ.ಎ ಖಾಜಿ, ಲಕ್ಷ್ಮೀ, ಖಾಜೇರ್, ರಾಜು ಕುರಿಯವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.