ADVERTISEMENT

ಜಲಜೀವನ್: ಪರಿಶೀಲನೆಗೆ ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:59 IST
Last Updated 19 ಆಗಸ್ಟ್ 2025, 2:59 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿದ್ದ ನಳದಿಂದ ಕೆಲದಿನಗಳಲ್ಲೇ ಕಿತ್ತು ಹೋದ ವಾಲ್
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಂಕಣವಾಡದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಳವಡಿಸಿದ್ದ ನಳದಿಂದ ಕೆಲದಿನಗಳಲ್ಲೇ ಕಿತ್ತು ಹೋದ ವಾಲ್   

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಕಂಕಣವಾಡ ಗ್ರಾಮದಲ್ಲಿ ಅನುಷ್ಠಾನಗೊಳಿಸಲಾಗಿದೆ ಎನ್ನಲಾದ ‘ನಿರಂತರ ನೀರು ಯೋಜನೆ’ಯ ವಾಸ್ತವ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರುಚಿ ಬಿಂದಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗ್ರಾಮದ ನಿರಂತರ ನೀರು ಯೋಜನೆಯ ವಾಸ್ತವದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಕಂಕಣವಾಡ: ದುರಸ್ತಿ ಮುಚ್ಚಿಟ್ಟು ಪ್ರಥಮ ಗ್ರಾಮ ಘೋಚಣೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದನ್ನು ಗಮನಿಸಿದ ಸಿಇಒ ರುಚಿ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ಪಡೆಯಲು ಮುಂದಾಗಿದ್ದಾರೆ.

‘ಪ್ರಜಾವಾಣಿಯಲ್ಲಿ ಬಂದಿರುವ ವರದಿ ಗಮನಿಸಿದ್ದೇನೆ. ಕೇಂದ್ರದ ತಂಡವೊಂದು ಭೇಟಿ ನೀಡಿ, ಗ್ರಾಮದಲ್ಲಿ ಪರಿಶೀಲನೆ ನಡೆಸಿತ್ತು. ಅದಾದ ನಂತರ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪ್ರಥಮ ಗ್ರಾಮವೆಂದು ಘೋಷಿಸಿದ್ದಾರೆ. ನಾನು ಸಹ ಗ್ರಾಮಕ್ಕೆ ಹೋಗಿಲ್ಲ. ಅಲ್ಲಿಯ ವಾಸ್ತವದ ಬಗ್ಗೆ ವರದಿ ತರಿಸಿಕೊಂಡು, ಪರಿಶೀಲಿಸುವೆ. ನಾನು ಸಹ ಖುದ್ದು ಗ್ರಾಮಕ್ಕೆ ಹೋಗಿ ಬರುವೆ’ ಎಂದು ರುಚಿ ಬಿಂದಲ್ ಅವರು ತಿಳಿಸಿದರು.

ADVERTISEMENT

ಯೋಜನೆ ಕಳಪೆ ಅನುಮಾನ: ‘ಹನುಮರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಂಕಣವಾಡದಲ್ಲಿ ಜಲಜೀವನ್ ಯೋಜನೆ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದ್ದ ಗುತ್ತಿಗೆದಾರ, ಕಳಪೆ ಕಾಮಗಾರಿ ಮಾಡಿಸಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯಬೇಕು’ ಎಂದು ಗ್ರಾಮಸ್ಥರು ಹೇಳಿದರು.

‘ನೀರು ಪೂರೈಕೆಗೆ ಜಲಾಗಾರ ಟ್ಯಾಂಕ್ ನಿರ್ಮಿಸಲಾಗಿದೆ. ಅದು ಸಹ ಕಳಪೆಯಾಗಿದೆ. ನಳಗಳ ಅಳವಡಿಕೆಗೆ ಬಳಸಿರುವ ವಸ್ತುಗಳು ಸಹ ಕಳಪೆ ಮಟ್ಟದಾಗಿವೆ. ಕೆಲ ದಿನಗಳಲ್ಲಿಯೇ ಬಹುತೇಕ ವಸ್ತುಗಳು ಹಾಳಾಗಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.