ರಾಣೆಬೆನ್ನೂರಿನ: ಇಲ್ಲಿನ ಹಳೆಯ ಪಿ.ಬಿ. ರಸ್ತೆಯ ಶಿವಂ ಆಸ್ಪತ್ರೆಯಲ್ಲಿ ಜ. 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಟರಿ ಸಂಸ್ಥೆ ಹಾಗೂ ಶಿವಂ ಹಾಸ್ಪಿಟಲ್ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಡಾ.ವಿನಾಯಕ ಹಿರೇಗೌಡರ ಅವರು ರೋಗಿಗಳ ತಪಾಸಣೆ ಮಾಡುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ವಿರೇಶ ಮೋಟಗಿ, ಕಾರ್ಯದರ್ಶಿ ಪ್ರಕಾಶ ಮಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಭಕ್ತರ ಉದ್ಧಾರಕ್ಕೆ ಜನ್ಮವೆತ್ತಿದ ಸಿದ್ಧಾರೂಢ’
ಅಕ್ಕಿಆಲೂರು: ಶಿವಶರಣರು ಸಾಧು ಸಂತರು ಪುಣ್ಯ ಪುರುಷರು ದೈವ ಸಂಪನ್ನರು ಭಕ್ತರ ಉದ್ಧಾರಕ್ಕಾಗಿ ಈ ಭೂಮಿಯ ಮೇಲೆ ಮತ್ತೆ ಮತ್ತೆ ಅವತಾರವೆತ್ತಿ ಧರ್ಮ ಸ್ಥಾಪನೆ ಮಾಡಿದ್ದಾರೆ ಎಂದು ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ದಾರೂಢ ಸ್ವಾಮೀಜಿ ಹೇಳಿದರು. ಹಾನಗಲ್ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ ನಡೆದ ಸಿದ್ದಾರೂಢ ಸ್ವಾಮೀಜಿ ಪದಾರ್ಪಣೆಯ ಶತಮಾನೋತ್ಸವ ಶಂಕರಾನಂದ ಸ್ವಾಮೀಜಿ ಷಷ್ಠಬ್ಧಿ ಹಾಗೂ ನೂತನ ರಥ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಸಾಹಿತಿ ಎನ್.ಎಸ್.ಮುಶೆಪ್ಪನವರ ಅವರ ಶ್ರೀ ಸಿದ್ದಾರೂಢರ ಸವಿ ನೆನಪು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹರಿದ್ವಾರದ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ ಶಿವಶರಣರು ಸರ್ವಸ್ವವನ್ನು ತ್ಯಾಗ ಮಾಡಿ ನಮಗೆ ಸನ್ಮಾರ್ಗ ತೋರಿದ್ದಾರೆ. ಶಿವನ ಅಮೋಘ ಶಕ್ತಿಯಿಂದ ಸಿದ್ದಾರೂಢರು ಈ ಧರೆಯಲ್ಲಿ ಜನ್ಮವೆತ್ತಿ ಧರ್ಮ ಸಂಸ್ಥಾಪನೆ ಮಾಡಿದ್ದಾರೆ. ದೇಶಾದ್ಯಂತ ಸಂಚಾರ ಮಾಡಿ ಭಾವೈಕ್ಯತೆ ಸಾರಿದ್ದಾರೆ ಎಂದರು. ಸಾಹಿತಿ ಎನ್.ಎಸ್.ಮುಶೆಪ್ಪನವರ ಸೇರಿದಂತೆ ಹಲವು ಮಠಾಧೀಶರು ಕಲಾವಿದರು ಸದ್ಭಕ್ತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.