ADVERTISEMENT

‘ಹೆಣ್ಣು ಮಗುವಿಗೆ ಬೆಂಬಲ ನೀಡಿ’

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 13:46 IST
Last Updated 25 ಜನವರಿ 2025, 13:46 IST
ಸವಣೂರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭವನ್ನು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ಉದ್ಘಾಟಿಸಿದರು
ಸವಣೂರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭವನ್ನು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ಉದ್ಘಾಟಿಸಿದರು   

ಸವಣೂರು: ನಿತ್ಯ ಒತ್ತಡದ ಜೀವನದಲ್ಲಿ ಸಮಾಜ, ಕುಟುಂಬದೊಂದಿಗೆ ಹೊಂದಾಣಿಕೆಯಿಂದ ವೈಯಕ್ತಿಕ ಆಸೆ ಬದಿಗಿರಿಸಿ ಮಾತೃ ಹೃದಯ ಹೊಂದಿರುವ ಹೆಣ್ಣು ಜೀವಕ್ಕೆ ಸರ್ವರ ಬೆಂಬಲ ಅವಶ್ಯವಾಗಿದೆ ಎಂದು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದ ಸಾವಿನವರಿಗೂ ಕುಟಂಬಸ್ಥರಿಗೆ ಆಶ್ರಯ ನೀಡಲು ಬಯಸುವ ಜೀವ ಎಂದರೆ ಹೆಣ್ಣು. ಮಹಿಳೆ ಸಾಧನೆ ಮೂಲಕ ತನ್ನ ಶಕ್ತಿ ತೋರಿಸುತ್ತಿದ್ದಾಳೆ. ಮಹಿಳೆಯರಿಗೆ ಮಾತೃತ್ವ ಅನ್ನೋದು ದೇವರು ಕರುಣಿಸಿದ ಅದೃಷ್ಟದ ವರ ಎಂದರು.

ADVERTISEMENT

ಸಿಡಿಪಿಒ ಉಮಾ ಕೆ.ಎಸ್., ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟ ಪೂರ್ವ ಅಧ್ಯಕ್ಷ ಬಸವರಾಜ ಚಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಮಾತೃವಂದನಾ ತಾಲ್ಲೂಕು ಸಂಯೋಜಕಿ ರೇಷ್ಮಾ ನೀರಲಗಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಜನ್ಮದಿನ ಆಚರಣೆ, ಮಕ್ಕಳಿಗೆ ಪೇಷಭೂಷಣ ಸ್ಪರ್ಧೆ ನಡೆಯಿತು.

ಟಿಎಚ್‍ಒ ಡಾ.ಚಂದ್ರಕಲಾ ಜೆ., ರಮೇಶ ಅರಗೋಳ, ಯೋಗೇಂದ್ರ ಜಂಬಗಿ, ಅಂಗನವಾಡಿ ಸುನಂದಾ ರೇವಣಕರ, ಸುಜಾತಾ ಬೆಟಗೇರಿ, ಮಧುಕರ ಜಾಲಿಹಾಳ, ಪುಷ್ಪಾ ಬತ್ತಿ, ಸೋನಿಯಾ ಮೇಟಿ, ಕವಿತಾ ಬಿಕ್ಕಣ್ಣನವರ, ಲಲಿತಾ ಅಪ್ಪಣ್ಣನವರ, ಉಮಾ ಭೂಸನೂರಮಠ, ತೇಜಸ್ವಿನಿ ಹೊಳಲ ಪಾಲ್ಗೊಂಡಿದ್ದರು.

ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.