ADVERTISEMENT

ವಿದೇಶದ ಸರೋವರಗಳಲ್ಲಿ ಈಜಿದ ಅಧಿಕಾರಿ

ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬಹುಮಾನ

ಮಂಜುನಾಥ ರಾಠೋಡ
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಶ್ಯಾಮಸುಂದರ್ ಅಡಿಗ
ಶ್ಯಾಮಸುಂದರ್ ಅಡಿಗ   

‘ಸರ್ಕಾರಿ ನೌಕರರ ಸಂಘದಿಂದ ನಡೆಯುವ ಇಲಾಖಾ ಕ್ರೀಡಾಕೂಟದಲ್ಲಿ 2011ರಿಂದಈಚೆಗೆ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಪಡೆದಿದ್ದೇನೆ. ಅಲ್ಲದೇ, ರಾಷ್ಟ್ರಮಟ್ಟದಲ್ಲಿ ನಡೆಯುವ ‘ಆಲ್‌ ಇಂಡಿಯಾ ಸಿವಿಲ್‌ ಸರ್ವಿಸ್ಸ್‌ (ಎಐಸಿಎಸ್‌)’ ಕ್ರೀಡಾಕೂಟದಲ್ಲಿ 5 ಬಾರಿ ಸ್ಪರ್ಧಿಸಿದ್ದೇನೆ. 50, 100, 200 ಮೀಟರಫ್ರೀ ಸ್ಟೈಲ್‍ನಲ್ಲಿ ಪರಿಣತಿಪಡೆದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಅಡಿಗ.

‘ನಾನು ಪದವಿ ಹಂತದಲ್ಲಿರುವಾಗ ಈಜಿನಲ್ಲಿ ‘ಬ್ಲೂ ಸೆಲೆಕ್ಷನ್‌’ಗೆ ಸ್ಪರ್ಧಿಯಾಗಿದೆ. ಆದರೆ, ಸರಿಯಾಗಿ ತರಬೇತಿ ಇಲ್ಲದ ಆಯ್ಕೆ ಆಗಿರಲಿಲ್ಲ. ಅಂದು (1994) ಈಜುನಿಲ್ಲಿಸಿದ ನಾನು, ಮತ್ತೆ ಈಜಿದ್ದು 2011ರಲ್ಲಿ ನಡೆದ ರಾಜ್ಯ ಸರ್ಕಾರಿನೌಕರರ ಕ್ರೀಡಾಕೂಟದಲ್ಲಿ. ನಾನು ಮೊದಲ ಬಾರಿ ಪ್ರಶಸ್ತಿ ಪಡೆದಿದ್ದು ಅದೇ ಸ್ಪರ್ಧೆಯಲ್ಲಿ’ ಎನ್ನುತ್ತಾರೆ ಅವರು.

‘2017ರಲ್ಲಿಈ ಹಿಂದೆ ಥಾಯ್ಕೆಂಡ್‌ನ ಬೀಚ್‍ನಲ್ಲಿ ‘ಸುಮೇಥಾನ್’ ಸ್ಪರ್ಧೆಯಲ್ಲಿ 6 ಕಿ.ಮೀ ಅಂತರನ್ನು 2 ಗಂಟೆ 32 ನಿಮಿಷದಲ್ಲಿ ಪೂರ್ಣಗೊಳಿಸಿ ಆರನೇ ಸ್ಥಾನವನ್ನು ಪಡೆದಿದ್ದೆ. ಇದೀಗ 2020ರ ಜೂನ್‌ನಲ್ಲಿ ಇಂಗ್ಲೆಂಡ್‌ನ ‘ರೋವರ್‌ ಬೀಚ್‌’ನಿಂದ ಫ್ರಾನ್ಸ್‌ ಸಂಪರ್ಕ ಕಲ್ಪಿಸುವ ಸರೋವರದಲ್ಲಿ 37 ಕಿ.ಮೀ ಈಜಲು ನೋಂದಣಿ ಮಾಡಿಕೊಂಡಿದ್ದೇನೆ. ಅದಕ್ಕಾಗಿ ಸಮಯ ಸಿಕ್ಕಾಗ ಸಿದ್ಧತೆಯೂನಡೆಸುತ್ತಿದ್ದೇನೆ’ ಎಂದು ಅವರು ವಿವರಿಸುತ್ತಾರೆ.

ADVERTISEMENT

‘ಈ ಸರೋವರದಲ್ಲಿ 37 ಕಿ.ಮೀ ಈಜಲು ಕರ್ನಾಟಕದಿಂದ ಎಂ.ಮಂಜುನಾಥ (ಚಿಕ್ಕಬಳ್ಳಾಪುರ), ಮೋತಿ ನಾಯಕ (ಶಿವಮೊಗ್ಗ) ಹಾಗೂ ಗೋಪಾಲ (ಬೆಂಗಳೂರು) ತಂಡ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

ಜಾಗೃತಿಗಾಗಿ ಸ್ಪರ್ಧೆಗಳು: ’ವಿವಿಧ ಫೆಡರೇಷನ್‌ ವತಿಯಿಂದ ನಡೆಯುವ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಪ್ರಶಸ್ತಿಯನ್ನು ಪಡೆದಿದ್ದೇವೆ. ಗುಜರಾತ್, ಗೋವಾ, ಕೇರಳ, ಪಶ್ಚಿಮ ಬಂಗಾಳದಲ್ಲಿಯೂ ಪಾಲ್ಗೊಂಡಿದ್ದೇನೆ.ಇಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಬಹುಮಾನ ಬರುವುದು ಬರುವುದು ಕಡಿಮೆ. ಹವ್ಯಾಸಿಗರನ್ನು ಒಗ್ಗೂಡಿಸುವುದು, ಸಾಮಾಜಿಕ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಇಂತಹ ಸ್ಪರ್ಧೆಗಳು ನಡೆಯುತ್ತವೆ‘ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.