ADVERTISEMENT

ಹಾವೇರಿ | 'ರಜಾ ದಿನಗಳಲ್ಲಿ ಉಪ ನೋಂದಣಿ ಕಚೇರಿ ಕಾರ್ಯನಿರ್ವಹಣೆ'

​ಪ್ರಜಾವಾಣಿ ವಾರ್ತೆ
Published 27 ಮೇ 2025, 14:31 IST
Last Updated 27 ಮೇ 2025, 14:31 IST

ಹಾವೇರಿ: ಜೂನ್ 1ರಿಂದ ಡಿಸೆಂಬರ್ 28ರವರೆಗೆ ಜಿಲ್ಲೆಯ ಎಲ್ಲ ಉಪ ನೋಂದಣಿ ಕಚೇರಿಗಳು ರಜಾ ದಿನಗಳಲ್ಲಿಯೂ ಕಾರ್ಯನಿರ್ವಹಣೆ ಮಾಡಲಿವೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಜಿಲ್ಲಾ ನೋಂದಣಾಧಿಕಾರಿ, ‘2ನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರದ ರಜಾ ದಿನಗಳಂದು ಸಹ ಕಚೇರಿಗಳು ತೆರೆದಿರಲಿವೆ’ ಎಂದು ತಿಳಿಸಿದ್ದಾರೆ.

‘ರಜಾ ದಿನಗಳಂದು ಕರ್ತವ್ಯ ನಿರ್ವಹಿಸಿದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಮಂಗಳವಾರ ದಿನವನ್ನು ರಜಾ ದಿನವನ್ನಾಗಿ ಘೋಷಿಸಲಾಗಿದೆ. ಹಾವೇರಿ ಜಿಲ್ಲಾ ನೋಂದಣಿ ಕಚೇರಿ ಮತ್ತು ಜಿಲ್ಲೆಯ ಎಲ್ಲ ಉಪ ನೋಂದಣಿ ಕಚೇರಿಗಳ ನೋಟಿಸ್ ಬೋರ್ಡ್‌ಗಳ ವೇಳೆ ಹೊಸ ವೇಳಾಪಟ್ಟಿ ಲಗತ್ತಿಸಲಾಗಿದೆ. ರಜಾ ದಿನಗಳದ್ದು ಕಾರ್ಯನಿರ್ವಹಣೆ ಮಾಡುವ ಸೌಲಭ್ಯವನ್ನು ಸಾರ್ವಜನಿಕರು ಸದುಯಪಯೋಗ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.