ರಟ್ಟೀಹಳ್ಳಿ: ಪಟ್ಟಣದಲ್ಲಿ ರಂಜಾನ್ ಹಾಗೂ ವೀರಭದ್ರೇಶ್ವರ ಜಾತ್ರೆಯ ಪ್ರಯುಕ್ತ ಗುರುವಾರ ಭಾರಿ ಜಂಗಿ ಕುಸ್ತಿ ಏರ್ಪಡಿಸಲಾಗಿತ್ತು.
ವಿವಿಧ ಜಿಲ್ಲೆ, ತಾಲ್ಲೂಕು ಗಳಿಂದ ಕುಸ್ತಿ ಪೈಲಾನ್ವರು ಆಗಮಿಸಿದ್ದರು. ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ಬಹುಮಾನ ₹10 ಸಾವಿರ ಹಾಗೂ ತೃತೀಯ ಬಹುಮಾನ ₹5 ಸಾವಿರ ಹಾಗೂ ಗೆದ್ದವರಿಗೆ ಗದೆ, ಟ್ರೋಫಿ ನೀಡಲಾಯಿತು. ಸಹಸ್ರಾರು ಜನರು ಕುಸ್ತಿ ಪಂದ್ಯಾಟ ನೋಡಲು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.