ಶಿಗ್ಗಾವಿ: ಪ್ರಸಕ್ತ ವರ್ಷದಲ್ಲಿ ಶಿಗ್ಗಾವಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿ ಅವಶ್ಯವಿರುವ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ಮೂಲಕ ವಿತರಿಸುವ ಕಾರ್ಯಕ್ಕೆ ಸೋಮವಾರ ಆರಂಭಿಸಲಾಯಿತು.
ಸೋಯಾಬಿನ್ ಬೀಜ 445.5 ಕ್ವಿಂಟಲ್, ಶೇಂಗಾ 39 ಕ್ವಿಂಟಲ್, ತೊಗರಿ 7.20 ಕ್ವಿಂಟಲ್, ಹೆಸರು 4.80 ಕ್ವಿಂಟಲ್, ಗೋವಿನಜೋಳ 1.36 ಕ್ವಿಂಟಲ್ ಬಿತ್ತನೆ ಬೀಜವನ್ನು ಸಂಗ್ರಹವಾಗಿದ್ದು, ರೈತರಿಗೆ ಬೇಕಾಗುವ ಬೀಜಗಳನ್ನು ಪಡೆಯಲು ರೈತರು ಸರತಿಯಲ್ಲಿ ನಿಂತು ಬೀಜ ಪಡೆಯುತ್ತಿರುವುದು ಕಂಡು ಬಂದಿತು.
ನಂತರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜ್ಜಿ ಚಾಲನೆ ನೀಡಿ ಮಾತನಾಡಿ, ರೈತರ ಬೇಡಿಕೆಯಂತೆ ಪ್ರತಿ ಬಿತ್ತನೆ ಬೀಜವನ್ನು ವಿತರಿಸಲಾಗುತ್ತಿದೆ. ಶಾಂತ ರೀತಿಯಲ್ಲಿ ನಿಂತು ಬೀಜ ಪಡೆಯಬೇಕು. ಬಿತ್ತನೆಗೆ ಮುನ್ನ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಬೀಜ ಕೊರತೆಯಾಗದಂತೆ ನೋಡಿಕೊಳ್ಳಲಾವುದು. ಸಂಬಂಧಿಸಿದ ದಾಖಲೆಗಳನ್ನು ನೀಡಬೇಕು ಎಂದರು.
ರೈತ ಸಂಘದ ಅಧ್ಯಕ್ಷ ಆನಂದ ಕಳೆಗಿನಮನಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಬಸಲಿಂಗಪ್ಪ ನರಗುಂದ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು, ಕೃಷಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.