ADVERTISEMENT

ಹಿರೇಕೆರೂರ | ಪಶು ಆಸ್ಪತ್ರೆಗಳ ನಿರ್ಮಾಣಕ್ಕೆ ಅನುಮೋದನೆ 

ಶಾಸಕ ಯು.ಬಿ. ಬಣಕಾರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 14:37 IST
Last Updated 23 ಜೂನ್ 2025, 14:37 IST
ಯು.ಬಿ. ಬಣಕಾರ
ಯು.ಬಿ. ಬಣಕಾರ   

ಹಿರೇಕೆರೂರ: ‘ಈ ವರ್ಷ ಮೂರು ಕಡೆ ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು. ಕೋಡ, ಕಚವಿ ಮತ್ತು ಹೊಸಕಟ್ಟಿಗಳಲ್ಲಿ ತಲಾ ₹ 60 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಪಶು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿಯ ಸಿದ್ದರಾಮಯ್ಯನವರು 100 ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್‌ನ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಹಯೋಗದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದು ಆ ಪ್ರಕಾರ 100ರಲ್ಲಿ 3 ಕಟ್ಟಡಗಳು ಹಿರೇಕೆರೂರ ವಿಧಾನಸಬಾ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದೆ’ ಎಂದು ಹೇಳಿದರು.

‘2 ವರ್ಷಗಳಲ್ಲಿ ಸರ್ಕಾರ ಹಿರೇಕೆರೂರ ಕ್ಷೇತ್ರಕ್ಕೆ 2 ಪಶು ಚಿಕಿತ್ಸಾಲಯ ಕೋಡ ಮತ್ತು ಕಚವಿಗೆ ಮಂಜೂರು ಮಾಡಿದ್ದು. ಕಚವಿಗೆ ಪಶು ಚಿಕಿತ್ಸಾಲಯ ಉದ್ಘಾಟನೆ ಮಾಡಲು ಬಂದಿದ್ದ ಪಶು ಸಂಗೋಪನಾ ಸಚಿವರಾದ ವೇಂಕಟೇಶ ಅವರು ಕಟ್ಟಡವನ್ನು ಮಂಜೂರು ಮಾಡುವುದಾಗಿ ಘೊಷಣೆ ಮಾಡಿದ ಪ್ರಕಾರ, ಅಲ್ಲದೇ ಅಸ್ಕಾಡ್ ಯೋಜನೆಯಡಿ ಪ್ರಯೋಗಾಲಯ ಮಂಜೂರಾಗಿದ್ದು ಅದರಲ್ಲಿ ₹ 2 ಲಕ್ಷ ಪರಿಕರಗಳಿಗೆ, ₹ 8 ಲಕ್ಷ ಕಟ್ಟಡಕ್ಕೆ ಬಳಸಲಾಗುವುದು’ ಎಂದು ಹೇಳಿದರು.

ADVERTISEMENT

‘ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ 27,086 ಮತ್ತು ಚರ್ಮಗಂಟು ರೋಗಕ್ಕೆ 25,093 ಲಸಿಕೆ ಹಾಕಲಾಗಿದೆ. ಸದ್ಯ ಯಾವುದೇ ರೋಗ ಕಾಣಿಸಿಕೊಂಡಿಲ್ಲ’ ಎಂದು ತಿಳಿಸಿದರು.

ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ಲಸಿಕೆಯನ್ನು ಮಾಡಲು ಇಲಾಖೆ ಸದಾ ತಯಾರಿದೆ. ತಾಲ್ಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಔಷಧ ಕೊರತೆ ಇಲ್ಲ. ಹೆಚ್ಚಿನ ಔಷಧಗಳ ಬೇಡಿಕೆ ಬಂದಲ್ಲಿ ಪೂರೈಸಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಮುಖ್ಯಪಶುವೈದ್ಯಾಧಿಕಾರಿ ಡಾ.ಕಿರಣ್‌ ಎಲ್‌. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.