ADVERTISEMENT

ಜಕಣಾಚಾರಿ ಹೆಸರಿನೊಂದಿಗೆ ನಾಡಿನ ಕಲೆ ಶಾಶ್ವತ: ಶಾಸಕ ಶ್ರೀನಿವಾಸ ಮಾನೆ

ಜಕಣಾಚಾರಿ ಸಂಸ್ಮರಣಾ ದಿನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:30 IST
Last Updated 3 ಜನವರಿ 2026, 4:30 IST
ಹಾನಗಲ್‌ ತಾರಕೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿಗೆ ಸಂಘದಿಂದ ನಡೆದ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು
ಹಾನಗಲ್‌ ತಾರಕೇಶ್ವರ ದೇವಸ್ಥಾನ ಆವರಣದಲ್ಲಿ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿಗೆ ಸಂಘದಿಂದ ನಡೆದ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು   

ಹಾನಗಲ್: ‘ಜಕಣಾಚಾರಿ ಅವರ ಹೆಸರಿನೊಂದಿಗೆ ನಮ್ಮ ನಾಡಿನ ಕಲೆ ಶಾಶ್ವತವಾಗಿದೆ. ಅವರ ಕಲೆ, ಸೂಕ್ಷ್ಮ ಕೆತ್ತನೆಗಳ ದೇವಸ್ಥಾನ, ಸ್ಮಾರಕಗಳನ್ನು ಮುಂದಿನ ಪೀಳಿಗೆವರೆಗೆ ಸಂರಕ್ಷಿಸುವ ಅಗತ್ಯವಿದೆ’ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಗುರುವಾರ ಇಲ್ಲಿನ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಪರ್ಕ, ಸೌಲಭ್ಯಗಳು ಹೆಚ್ಚು ಇಲ್ಲದೇ ಇರುವ ಸಮಯದಲ್ಲಿ ಕಲ್ಪನೆಯ ಮುಖಾಂತರ ಕಲ್ಲಿಗೆ ಶಿಲ್ಪಕಲೆಯ ರೂಪ ಕೊಟ್ಟಿದ್ದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

ತಾಲ್ಲೂಕು ಕೇಂದ್ರದಲ್ಲಿ ವಿಶ್ವಕರ್ಮ ಸಮಾಜಕ್ಕೆ ನಿವೇಶನ ದೊರಕಿಸುವುದಾಗಿ ಹೇಳಿದರು.

ತಹಶೀಲ್ದಾರ್ ರೇಣುಕಾ ಎಸ್. ಮಾತನಾಡಿ, ‘ಸ್ವಾಭಿಮಾನ, ಶ್ರಮ ಮತ್ತು ಶ್ರೇಷ್ಠತೆಯ ಸಂಕೇತ ಅಮರಶಿಲ್ಪಿ ಜಕಣಾಚಾರಿ. ಅವರ ಶಿಲ್ಪಕಲೆಗಳು ಕಾಲಾತೀತ. ಶಾಶ್ವತ ಸೌಂದರ್ಯದ ಪ್ರತೀಕ. ನಮ್ಮ ಹಾನಗಲ್ ತಾರಕೇಶ್ವರ ದೇವಸ್ಥಾನ ಸೇರಿದಂತೆ ಅಸಂಖ್ಯಾತ ದೇವಸ್ಥಾನಗಳು ಜಕಣಾಚಾರಿ ಕೈಚಳಕದಿಂದ ಮೂಡಿಬಂದಿವೆ’ ಎಂದರು.

ಮೌನೇಶ ಕಮ್ಮಾರ ಉಪನ್ಯಾಸ ನೀಡಿದರು.

ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣ ಅರ್ಕಸಾಲಿ, ಉಪಾಧ್ಯಕ್ಷ ಈಶ್ವರ ಬಡಿಗೇರ, ಕಾರ್ಯದರ್ಶಿ ರುದ್ರೇಶ ಬಡಿಗೇರ, ಗಣ್ಯರಾದ ಜಿ.ಬಿ.ಹಿರೇಮಠ, ಸಿ.ಎಸ್.ಬಡಿಗೇರ, ಜೆ.ಸಿ.ಬಡಿಗೇರ, ಪ್ರಕಾಶ ಬಡಿಗೇರ, ಬಸವರಾಜ ಬಡಿಗೇರ, ಜಗದೀಶ ಬಡಿಗೇರ, ಪ್ರಭು ಕಮ್ಮಾರ, ಲೋಕೇಶ ಕಮ್ಮಾರ, ವಿಶ್ವನಾಥ ಬಡಿಗೇರ, ಅಶೋಕ ಬಡಿಗೇರ, ರಾಘವೇಂದ್ರ ಬಡಿಗೇರ, ಜಗದೀಶ ಬಡಿಗೇರ, ಹನುಮಂತಪ್ಪ ಬಡಿಗೇರ, ಮೌನೇಶ ಕಮ್ಮಾರ, ನಾರಾಯಣ ಬಡಿಗೇರ ಇದ್ದರು.

ಹಿರೇಕೇರೂರು ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಗುರುವಾರ  ಅಮರಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನ ಆಚರಿಸಲಾಯಿತು. ಸಮಾಜದ ಮುಖಂಡರಾದ ನಿಂಗಾಚಾರ್ಯ ಮಾಯಾಚಾರ   ಪ್ರಕಾಶ ನಿಟ್ಟೂರ ಅಶೋಕ ಬಡಿಗೇರ ವಿಜಯಕುಮಾರ ಮಾಯಾಚಾರಿ ನಾಗಲಿಂಗ ಮಾಯಾಚಾರ ನಾಗರಾಜ ಅರ್ಕಾಚಾರಿ ಮೌನೇಶ ಅರ್ಕಾಚಾರಿ ರಾಜಶೇಖರ ಅರ್ಕಾಚಾರಿ ಉದಯಕುಮಾರ ಅರ್ಕಾಚಾರ ರಾಮಲಿಂಗ ಬಡಿಗೇರ ಕಾಳಿಂಗಾಚಾರ ಮಾಯಾಚಾರ ಮನು ಮಾಯಾಚಾರ ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.