ADVERTISEMENT

ಕೆಜಿಎಫ್‌: ನಸುಕಿನಲ್ಲೇ ಮೊದಲ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 9:32 IST
Last Updated 21 ಡಿಸೆಂಬರ್ 2018, 9:32 IST
ರಾಣೆಬೆನ್ನೂರಿನಲ್ಲಿ ತೆರೆ ಕಂಡ ಕೆ.ಜಿ.ಎಫ್. 
ರಾಣೆಬೆನ್ನೂರಿನಲ್ಲಿ ತೆರೆ ಕಂಡ ಕೆ.ಜಿ.ಎಫ್.    

ಹಾವೇರಿ:ನಗರ ಹಾಗೂ ರಾಣೆಬೆನ್ನೂರಿನ ತಲಾ ಎರಡು ಚಿತ್ರಮಂದಿರಗಳಲ್ಲಿ ಯಶ್‌ ನಟನೆಯ ಕೆ.ಜಿ.ಎಫ್ ಸಿನಿಮಾ ಶುಕ್ರವಾರ ತೆರೆ ಕಂಡಿದೆ.

ರಾಣೆಬೆನ್ನೂರಿನ ವೀಣಾ ಮತ್ತು ಶಂಕರ್‌ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 7.30ಕ್ಕೆ ಮೊದಲ ಪ್ರದರ್ಶನ ಆರಂಭಗೊಂಡಿದ್ದು, ಪ್ರತಿನಿತ್ಯ ಐದು ಪ್ರದರ್ಶನವಿದೆ.ಯಶ್‌ ಅಭಿಮಾನಿಗಳು ಶುಕ್ರವಾರ ಬೆಳಿಗ್ಗೆ 5.30 ಸುಮಾರಿಗೆ ಚಿತ್ರಮಂದಿರಕ್ಕೆ ಬಂದಿದ್ದು, ಸರದಿ ನಿಂತು ಟಿಕೆಟ್‌ ಖರೀದಿಸಿದ್ದಾರೆ. ಅಲ್ಲದೇ, ಹಲವರು ಆನ್‌ಲೈನ್ ಮೂಲಕ ಮೊದಲೇ ಟಿಕೆಟ್‌ ಕಾಯ್ದಿರಿಸಿದ್ದರು.

ಹಾವೇರಿಯಲ್ಲಿ ಮಾಗಾವಿ ಹಾಗೂ ಸರಸ್ವತಿ ಚಿತ್ರಮಂದಿರಗಳಲ್ಲಿ ಕೆ.ಜಿ.ಎಫ್. ತೆರೆ ಕಂಡಿದೆ. ಆದರೆ, ಪ್ರೇಕ್ಷಕರ ಸಂಖ್ಯೆಯು ಅಷ್ಟಾಗಿ ಕಂಡುಬರಲಿಲ್ಲ. ಸಿನಿಮಾ ಪ್ರದರ್ಶನ ಇರುವ ಎಲ್ಲ ಚಿತ್ರಮಂದಿರಗಳ ಮುಂದೆ, ಯಶ್‌ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್‌ ಹಾಗೂ ಬ್ಯಾನರ್‌ಗಳನ್ನು ಹಾಕಿದ್ದು, ಕಟೌಟ್‌ಗಳಿಗೆ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
ಜಿಲ್ಲೆಯ ಹಾನಗಲ್, ಸವಣೂರು, ಹಿರೇಕೆರೂರ, ಶಿಗ್ಗಾವಿ, ರಟ್ಟೀಹಳ್ಳಿಯಲ್ಲೂ ಚಿತ್ರ ತೆರೆ ಕಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.