ADVERTISEMENT

ಕನ್ನಡ ಭಾಷೆ ಒಂದು ಬಹುದೊಡ್ಡ ಸಂಸ್ಕೃತಿ: ಸಾಹಿತಿ ಪ್ರಕಾಶ ಮನ್ನಂಗಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 3:01 IST
Last Updated 2 ಜನವರಿ 2026, 3:01 IST
ಬ್ಯಾಡಗಿ ಪಟ್ಟಣದ ಮೌಲಾನಾ ಆಜಾದ್‌ ಸರ್ಕಾರಿ ಮಾದರಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು 
ಬ್ಯಾಡಗಿ ಪಟ್ಟಣದ ಮೌಲಾನಾ ಆಜಾದ್‌ ಸರ್ಕಾರಿ ಮಾದರಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು    

ಬ್ಯಾಡಗಿ: ‘ಎರಡು ಸಾವಿರ ವರ್ಷದ ಇತಿಹಾಸ ಹೊಂದಿದ ಕನ್ನಡ ಭಾಷೆ ಜನತೆಯ ಜೀವಾಳ’ ಎಂದು ಸಾಹಿತಿ ಪ್ರಕಾಶ ಮನ್ನಂಗಿ ಹೇಳಿದರು.

ಪಟ್ಟಣದ ಮೌಲಾನಾ ಆಜಾದ್‌ ಸರ್ಕಾರಿ ಮಾದರಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಿವನಾಗಪ್ಪ ಮೇಲ್ಮುರಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ‘ರಾಜ್ಯದ ಆಡಳಿತ, ನ್ಯಾಯಾಲಯ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗುತ್ತಿದೆ’ ಎಂದರು.

ADVERTISEMENT

ಕಸಾಪ ತಾಲ್ಲೂಕು ಘಟದ ಅಧ್ಯಕ್ಷ ಬಿ.ಎಂ. ಜಗಾಪುರ ಮಾತನಾಡಿ, ‘ಕನ್ನಡ ಭಾಷೆ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಪಂಪ, ರನ್ನ, ಜನ್ನ, ಕುವೆಂಪು ಸೇರಿದಂತೆ ಮುಂತಾದ ಸಾಹಿತಿಗಳು ವಿಶ್ವಮಟ್ಟದಲ್ಲಿ ಭಾಷೆಯ ಕೀರ್ತಿ ಹೆಚ್ಚಿಸಿದ್ದಾರೆ’ ಎಂದರು.

ಈ ವೇಳೆ ಶರಣರ ಕುರಿತು ನಡೆದ ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಸಪ್ಪ ಮಾಗನೂರ, ಪ್ರಾಚಾರ್ಯ ಶಾಂತರಾಜ, ಮುಖ್ಯಶಿಕ್ಷಕ ಕೆ.ವಿ. ಶಿವರಾಜ, ನಿವೃತ್ತ ಶಿಕ್ಷಕ ಎಂ.ಎಂ. ಪಾಟೀಲ, ಎಂ.ಎ. ಪಠಾಣ, ರಾಜಶೇಖರ ಹೊಸಳ್ಳಿ, ಬಸವರಾಜ ಮೇಲ್ಮುರಿ, ಪ್ರಭುಗೌಡ ಪಾಟೀಲ, ಕಾಂತೇಶ ಕುಮ್ಮೂರ, ಆರ್.ಜಿ. ಬಸವರಾಜ ಎಚ್.ಕೆ. ಸಂಜನಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.