ADVERTISEMENT

ಚಿನ್ನಮುಳಗುಂದ: ಬೋನಿಗೆ ಬಿದ್ದ ಮತ್ತೊಂದು ಚಿರತೆ 

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 16:13 IST
Last Updated 24 ಜೂನ್ 2023, 16:13 IST
ಚಿರತೆ 
ಚಿರತೆ    

ಹಂಸಭಾವಿ (ಹಾವೇರಿ): ಇಲ್ಲಿಗೆ ಸಮೀಪೆದ ಚಿನ್ನಮುಳಗುಂದ ಗ್ರಾಮದಲ್ಲಿ ಐದು ದಿನಗಳ ಹಿಂದೆ ಚಿರತೆ ಸೆರೆಯಾಗಿತ್ತು. ಶನಿವಾರ ಮತ್ತೊಂದು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಕಳೆದ ಕೆಲವು ತಿಂಗಳಿಂದ ಈ ಗ್ರಾಮದ ಸುತ್ತಮುತ್ತಲಿನ ಕೃಷಿ ಭೂಮಿಗಳಲ್ಲಿ ಆಗಾಗ್ಗೆ ಎರಡು ಚಿರತೆ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದ್ದವು. ಈಗ ಎರಡೂ ಚಿರತೆಗಳು ಸೆರೆಯಾಗಿದ್ದು, ಈ ಭಾಗದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಹಿರೇಕೆರೂರು ವಲಯ ಅರಣ್ಯಾಧಿಕಾರಿ ವೀರೇಶ ಕಬ್ಬನ್, ವಲಯ ಉಪ ಅರಣ್ಯಾಧಿಕಾರಿ ಜಿ.ಎಂ. ಮುಲ್ಲಾನವರ, ಮಾಸೂರು ವಲಯ ಉಪ ಅರಣ್ಯಾಧಿಕಾರಿ ಎಸ್.ಜಿ.ಅಗಡಿ, ಸಿಬ್ಬಂದಿ ರಮೇಶ, ಮಲ್ಲೇಶಪ್ಪ ಪಾಲ್ಗೊಂಡಿದ್ದರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.