ADVERTISEMENT

ಕುಟುಂಬ ರಾಜಕಾರಣ ಕೊನೆಗೊಳ್ಳಲಿ: ಎನ್‌ಸಿಪಿ ರಾಜ್ಯ ಘಟಕದ ಕಾರ್ಯದರ್ಶಿ ಈರಪ್ಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 13:39 IST
Last Updated 16 ಫೆಬ್ರುವರಿ 2021, 13:39 IST
ಹಾವೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎನ್‌ಸಿಪಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾರಂಭವನ್ನು ಉದ್ಘಾಟಿಸಲಾಯಿತು 
ಹಾವೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎನ್‌ಸಿಪಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾರಂಭವನ್ನು ಉದ್ಘಾಟಿಸಲಾಯಿತು    

ಹಾವೇರಿ: ‘ಕುಟುಂಬ ರಾಜಕಾರಣವನ್ನು ಬಲವಾಗಿ ತಿರಸ್ಕರಿಸಬೇಕು ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಪ್ರತಿಭಾವಂತ ಯುವಕ–ಯುವತಿಯರು ರಾಜಕಾರಣಕ್ಕೆ ಬರಬೇಕು’ ಎಂದು ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ (ಎನ್‌.ಸಿ.ಪಿ) ರಾಜ್ಯ ಕಾರ್ಯದರ್ಶಿ ಈರಪ್ಪ ಎಮ್ಮಿ ಸಲಹೆ ನೀಡಿದರು.

ನಗರದಹೋಟೆಲ್‌ ಮಾಲೀಕರ ಸಂಘದ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಎನ್‌ಸಿಪಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಗಾಗಿ ಯುವಜನರು ಎನ್‌ಸಿಪಿಗೆ ಸೇರ್ಪಡೆಯಾಗಬೇಕು ಎಂದು ಹೇಳಿದರು.

ಪ್ರಗತಿ ಪರ ರೈತರನ್ನು ಹಾಗೂ ದೇವಿಹೊಸೂರ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎಂ ಗಣಜೂರ, ‘ನಮ್ಮ ಪಕ್ಷದಲ್ಲಿ ಹೆಚ್ಚು ಹೆಚ್ಚು ರೈತರು ಸೇರ್ಪಡೆಗೊಂಡು ಪಕ್ಷವನ್ನು ಸಂಘಟಿಸಿ ಚುನಾವಣೆಗಳ ಸಂದರ್ಭದಲ್ಲಿ ಕಣಕ್ಕೆ ಇಳಿಯಬೇಕು ಎಂದು’ ಮನವಿ ನೀಡಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ತಳವಾರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ‘ಗ್ರಾಮೀಣ ಜನರು ಬೇರೆ ಬೇರೆ ಪಕ್ಷಗಳಿಗೆ ರಾಜ್ಯದಲ್ಲಿ ಅಧಿಕಾರವನ್ನು ಕೊಟ್ಟು ನೋಡಿ ಬೇಸತ್ತಿದ್ದಾರೆ. ರಾಜ್ಯ ಸರ್ಕಾರ ಜನವಿರೋಧಿಯಾಗಿದ್ದು, ಅನ್ಯಾಯ, ಅಕ್ರಮಗಳ ಬಗ್ಗೆ ಹೋರಾಟ ಮಾಡಬೇಕು ಎಂದರು.

ಎಂ.ಎಂ.ಕಳ್ಳಿಹಾಳ ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದರು.
ಫಕ್ಕೀರಡ್ಡಿ ಅತ್ತಿಗೇರಿ,ಅಶೋಕ ಬಾರ್ಕಿ, ಬಸವರಾಜ ಬಂಗೇರ, ಪ್ರಕಾಶ ಮರಲಿಂಗಣ್ಣನವರ, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ದೂದಿಹಳ್ಳಿ, ಬಸಯ್ಯ ಗೊಂಡವಾಳಮಠ, ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಹುಡೇದ, ಶಿವಕುಮಾರ ಕುಡುಪಲಿ, ಸಿದ್ದಪ್ಪ ಉಳ್ಳಟ್ಟಿ, ಮಂಜುನಾಥ ಮುಗದೂರ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ ಕೆಂಚೆಲ್ಲಣ್ಣನವರ, ಶಶೀಕಲಾ ಆರಿಕಟ್ಟಿ, ಸುಮಾ ಪುರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.