ADVERTISEMENT

‘ಸಾಲ-ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 14:46 IST
Last Updated 2 ಏಪ್ರಿಲ್ 2021, 14:46 IST
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಹಾವೇರಿ ಜಿಲ್ಲಾ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಈಚೆಗೆ ಸನ್ಮಾನಿಸಲಾಯಿತು 
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಹಾವೇರಿ ಜಿಲ್ಲಾ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಈಚೆಗೆ ಸನ್ಮಾನಿಸಲಾಯಿತು    

ಹಾವೇರಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳ ಗುತ್ತಿಗೆ ಪಡೆಯಲು ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಮಾದಿಗ ಸಮಾಜದ ಗುತ್ತಿಗೆದಾರರಿಗೆಸಾಲ-ಸೌಲಭ್ಯ ಕಲ್ಪಿಸಲು ಸಂಘ ಮುಂದಾಗಿದೆ. ಸಾಲ-ಸೌಲಭ್ಯದ ಪ್ರಯೋಜನ ಪಡೆದು ಸ್ವಾಲಂಬಿಗಳಾಗಿ ಎಂದು ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂಗಮೇಶ ಕಟಗೂರ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ಆದಿಜಾಂಬವ ಯುವ ಒಕ್ಕೂಟ, ಮಹಿಳಾ ಘಟಕ, ವಿದ್ಯಾರ್ಥಿ ಘಟಕ, ಬೀದಿಬದಿ ವ್ಯಾಪಾರಿಗಳ ಘಟಕ, ಅಸಂಘಟಿತ ಕಾರ್ಮಿಕರ ಘಟಕ, ಆಟೊ- ಟ್ಯಾಕ್ಸಿ ಚಾಲಕ ಮತ್ತು ಮಾಲೀಕರ ಘಟಕಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳನ್ನು, ಉಪಾಧ್ಯಕ್ಷರನ್ನು ನೇಮಿಸಿ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಸಂಘದ ನೂತನ ಕಾರ್ಯಾಲಯವನ್ನು ಶೀಘ್ರ ಸ್ಥಾಪಿಸಲಾಗುವುದು. ಸಂಘದ ಮೂಲಕ ಸಂಘಟಿತ ಹೋರಾಟ ನಡೆಸಿ ನ್ಯಾಯಬದ್ಧವಾಗಿ ಮಾದಿಗ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದು ಸಂಗಮೇಶ ಕಟಗೂರ್ ಹೇಳಿದರು.

ADVERTISEMENT

ಸಮಾಜದ ಗುರುಗಳಾದ ಷಡಕ್ಷರಿಮುನಿ ಮಹಾಸ್ವಾಮಿಜಿ ಮಾತನಾಡಿ, ಸಂಘವು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಮುಖಂಡರಾದ ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿದರು. ನಾಗರಾಜ ಮಾಳಗಿ, ಅಶೋಕ ಮರೆಣ್ಣನವರ, ಗಣೇಶ ಪೂಜಾರ, ಸಂಜಯಗಾಂಧಿ ಸಂಜೀವಣ್ಣನವರ, ಮಲ್ಲಿಕಾರ್ಜುನ ಬಾಂಬೆಕರ, ಲಕ್ಷ್ಮಣ ಕನವಳ್ಳಿ , ರಂಗಪ್ಪ, ರಾಜು ಮಾದರ ಇದ್ದರು.

ಪದಾಧಿಕಾರಿಗಳ ನೇಮಕ

ಕರ್ನಾಟಕ ರಾಜ್ಯ ಮಾದಿಗ ಗುತ್ತಿಗೆದಾರರ ಹಾವೇರಿ ಜಿಲ್ಲಾ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಗುತ್ತೆಪ್ಪ ಹರಿಜನ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಮಾದರ, ಉಪಾಧ್ಯಕ್ಷರಾಗಿ ರಾಮು ಮಾಳಗಿ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಧರ ಮೇಗಳಮನಿ, ರಾಜ್ಯ ಸಮಿತಿಯ ಸದಸ್ಯರಾಗಿ ಮಾಹಂತೇಶ ಬ್ಯಾಡಗಿ ನೇಮಕಗೊಂಡಿದ್ದಾರೆ.

‌***

ಮಾದಿಗರ ಸಂಘದ ಪೂರ್ವಭಾವಿ ಸಭೆಏ.4ರಂದು

ಹಾವೇರಿ: ರಾಜ್ಯ ಆದಿ-ಜಾಂಬವ (ಮಾದಿಗರ) ಸಂಘದ ಜಿಲ್ಲಾ ಘಟಕದ ಸಭೆಯನ್ನು ರಾಜ್ಯ ಆದಿಜಾಂಬವ ಸಂಘದ ಉಪಾಧ್ಯಕ್ಷ ಗಣೇಶ ಬಿ. ಪೂಜಾರ ಅಧ್ಯಕ್ಷತೆಯಲ್ಲಿ ಏ.4ರಂದು ಬೆಳಿಗ್ಗೆ 10 ಗಂಟೆಗೆ ನಗರದ ಕಾಗಿನೆಲೆ ಕ್ರಾಸ್ ಸಮೀಪದ ಮುರುಘರಾಜೇಂದ್ರ ಮಠದಲ್ಲಿ ಕರೆಯಲಾಗಿದೆ.

ಸದರಿ ಸಭೆಯಲ್ಲಿ ‘ಜಿಲ್ಲಾ ಮಟ್ಟದ ಮಾದಿಗರ ಸಮಾವೇಶದ ಕುರಿತು ಹಾಗೂ ಸಮಾಜದ ಸಂಘಟನೆ ಕುರಿತು ಚರ್ಚಿಸಲಾಗುತ್ತದೆ. ಜಿಲ್ಲೆಯ ಸಮಾಜದ ಮುಖಂಡರು, ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಸಭೆಗೆ ಆಗಮಿಸುವಂತೆ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.