ಸವಣೂರು: ಸವಣೂರಿನಿಂದ ಖಾನಕೋಣ, ಗೋವಾಕ್ಕೆ ಹೋಗುವ ಹಾಗೂ ಮರಳಿ ಭಾನುವಾರ ರಾತ್ರಿ 8ಕ್ಕೆ ಖಾನಕೋಣ, ಕಾರವಾರ, ಬಂಕಾಪೂರ ಮಾರ್ಗವಾಗಿ ಸವಣೂರಿಗೆ ಬರುವಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಬೀದಿಬದಿ ವ್ಯಾಪಾರಸ್ಥರು ಸವಣೂರು ಕೆಎಸ್‍ಆರ್‌ಟಿಸಿ ಬಸ್ ಘಟಕದ ವ್ಯವಸ್ಥಾಪಕ ಮುನ್ನಾಸಾಬ್ ಟಿ.ಎಸ್ ಅವರಿಗೆ ಮನವಿ ಸಲ್ಲಿಸಿದರು.
ಸವಣೂರು ಪಟ್ಟಣ ನಿವಾಸಿಗಳು ತರಕಾರಿ, ಹಣ್ಣು ಇತ್ಯಾದಿ ಬೀದಿ ವಾರದ ಸಂತೆ ವ್ಯಾಪಾರಸ್ಥರು ಇದ್ದು. ಬುಧವಾರ ಬೆಳಿಗ್ಗೆ ಯಲ್ಲಾಪೂರ ಹತ್ತಿರ ನಡೆದ ರಸ್ತೆ ಅಪಘಾತದಿಂದ ನಮಗೆ ರಕ್ಷಣೆ ಇಲ್ಲದಂತಾಗಿದೆ. ನಮಗೆ ಭಯ ಉಂಟಾಗಿರುತ್ತದೆ. ಆದ್ದರಿಂದ, ನಾವು ತೀರಾ ಬಡ ಕುಟುಂಬದವರು ಇದ್ದು, ಬಸ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ನಮಗೆ ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಸವಣೂರಿನಿಂದ, ಬಂಕಾಪೂರ, ಕಾರವಾರ, ಖಾನಕೋಣ, ಗೋವಾಕ್ಕೆ ಹೋಗುವಂತೆ ಮತ್ತು ಮರಳಿ ಭಾನುವಾರ ರಾತ್ರಿ 8ಕ್ಕೆ ಖಾನಕೋಣ, ಕಾರವಾರ, ಬಂಕಾಪೂರ ಮಾರ್ಗವಾಗಿ ಸವಣೂರಿಗೆ ಬರುವಂತೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಸ್ಥರಾದ ಕುಮಾರ ಉಪ್ಪಿನ, ಅಣ್ಣಪ್ಪ ಉಪ್ಪಿನ, ಹನಮಂತ ಜಾಧವ, ಬಾಬುಕಾಶಿಮ ಅಕ್ರಮ, ವಾಶಿಮ್ ಸವಣೂರ, ಜಗದೇಶ ಆರೇರ, ದಿಲದಾರಖಾನ, ಬಾಷಾ ಆಸೀಫ್ ಕಿಲ್ಲೇದಾರ, ಮುಜಾಹಿ್ದ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.