
ಸಾಮೂಹಿಕ ವಿವಾಹ
ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ಮಾಕನೂರು ಗ್ರಾಮದ ಸಿದ್ಧಾರೂಢ ಮಠದಲ್ಲಿ ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಜಯಂತಿ ಅಂಗವಾಗಿ 7ನೇ ವೇದಾಂತ ಪರಿಷತ್ತು, ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವು ನ.9 ಮತ್ತು 10 ರಂದು ಎರಡು ದಿನಗಳ ಕಾಲ ಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
ನ.9 ರಂದು ಸಂಜೆ 6.30 ರಿಂದ ನ.10 ಸೋಮವಾರ ಬೆಳಿಗ್ಗೆ 6.30ವರೆಗೆ ಚಿಕ್ಕಕಬ್ಬಾರ ಮಾರುತಿ ಭಜನಾ ಮಂಡಳಿ ಮತ್ತು ಮಾಕನೂರ ಭಜನಾ ಮಂಡಳಿಯವರಿಂದ ಸವಾಲ್ ಜವಾಬ್ ಭಜನಾ ಕಾರ್ಯಕ್ರಮ ನಡೆಯಲಿದೆ.
ನ.10 ರಂದು ಸೋಮವಾರ ಬ್ರಾಹ್ಮಿಮಹೂರ್ತದಲ್ಲಿ ಶಿವ ಮಹಿಮ ಪಾರಾಯಣದೊಂದಿಗೆ ಪ್ರಾರಂಭಗೊಂಡು ಬೆಳಿಗ್ಗೆ 4 ಗಂಟೆಯಿಂದ 7ಗಂಟೆಯವರೆಗೆ ಸಿದ್ಧಾರೂಢರ ಅಮೃತ ಶಿಲಾ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮ ನಡೆಯಲಿವೆ. ನಂತರ ಬೆಳಿಗ್ಗೆ 8 ಗಂಟೆಗೆ ಪ್ರಣವ ಧ್ವಜಾರೋಹಣ, ನಂತರ ಸ್ಥಳೀಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಭಕ್ತಿ ಗೀತೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು.
ನಂತರ 9.30 ಕ್ಕೆ ʻನರಜನ್ಮದಿಂದ ಇಹದೊಳು ಮಿಗಿಲುಂಟೆʼ ಕುರಿತು ವೇದಾಂತ ಪರಿಷತ್ ಪ್ರವಚನ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಚಳಗೇರಿಯ ಚನ್ನಯ್ಯ ಶಾಸ್ತ್ರಿ ನಡೆಸಿಕೊಡಲಿದ್ದಾರೆ. ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಠದ ಪೀಠಾಧಿಪತಿ ಗುರು ನಾಗರಾಜಾನಂದ ಮಹಾಸ್ವಾಮೀಜಿ ನೇತೃತ್ವ ವಹಿಸುವರು. ದಾವಣಗೆರೆಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಹದಡಿಯ ಚಂದ್ರಗಿರಿ ಮಠದ ಮುರಳಿಧರ ಸ್ವಾಮೀಜಿ, ವೀರಭದ್ರ ಸ್ವಾಮೀಜಿ ಉಪಸ್ಥಿತರಿರುವರು.
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರೂಣಕುಮಾರ ಪೂಜಾರ, ಮಹಾಂತೇಶ ಉಚ್ಚಣ್ಣನವರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಜೆಟ್ಟೆಪ್ಪ ಕರೆಗೌಡ್ರ, ಸಂತೋಷಕುಮಾರ ಪಾಟೀಲ, ಪರಶುರಾಮ ಕಲಿವಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರಪ್ಪ ಯಲಜಿ, ಉಪಾಧ್ಯಕ್ಷೆ ದುರುಗವ್ವ ಬಡಣ್ಣನವರ, ರೈತ ಮುಖಂಡ ಈರಣ್ಣ ಹಲಗೇರಿ, ಸಿಪಿಐ ಸಿದ್ದೇಶ ಎಂ.ಡಿ, ಪಿಎಸ್‌ಐ ಪ್ರವೀಣ ವಾಲಿಕಾರ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಆಗಮಿಸುವರು ಎಂದು ಕಾರ್ಯದರ್ಶಿ ಮಂಜುನಾಥ ಕುಂಬಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.