ADVERTISEMENT

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಆರೋಪ: ನಾಶಿಪುಡಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 14:18 IST
Last Updated 28 ಫೆಬ್ರುವರಿ 2024, 14:18 IST
<div class="paragraphs"><p>ವರ್ತಕ ನಾಶಿಪುಡಿ ವಿರುದ್ಧ ಕ್ರಮಕ್ಕೆ&nbsp;ಆಗ್ರಹ</p></div>

ವರ್ತಕ ನಾಶಿಪುಡಿ ವಿರುದ್ಧ ಕ್ರಮಕ್ಕೆ ಆಗ್ರಹ

   

ಬ್ಯಾಡಗಿ: ವಿಧಾನಸೌಧದಲ್ಲಿ ಮಂಗಳವಾರ ‘ಪಾಕಿಸ್ತಾನ್‌ ಜಿಂದಾಬಾದ್’ ಎಂದು ಕೂಗಿದ್ದಾರೆ ಎಂಬ ಆರೋಪದ ಮೇರೆಗೆ ಬ್ಯಾಡಗಿ ಪಟ್ಟಣದ ಮೆಣಸಿನಕಾಯಿ ವರ್ತಕ ಮಹ್ಮದ್‌ ಶಫಿ ನಾಶಿಪುಡಿ ವಿರುದ್ಧ ದೇಶದ್ರೋಹ ಪ್ರಕರಣದಡಿ ದೂರು ದಾಖಲಿಸಿ ತನಿಖೆ ನಡೆಸುವಂತೆ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಬುಧವಾರ ದೂರು ಸಲ್ಲಿಸಿದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ವಿಜಯೋತ್ಸವದ ವೇಳೆ ಪಾಲ್ಗೊಂಡಿದ್ದ ಮಹ್ಮದ್‌ ಶಫಿ ನಾಶಿಪುಡಿ ಅವರು ‘ಪಾಕಿಸ್ತಾನ್‌ ಜಿಂದಾಬಾದ್’ ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿದೆ. ಇಂತಹ ದೇಶದ್ರೋಹ ಹೇಳಿಕೆ ನೀಡಿದ ಅವರನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸದಿರುವುದು ದುರುದೃಷ್ಟಕರ ಸಂಗತಿ. ಮಹ್ಮದ್‌ಶಫಿ ನಾಶೀಪುಡಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಥವಾ ಸದರಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕೆಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವಣ್ಣೆಪ್ಪ ಛತ್ರದ ಮಾತನಾಡಿ, ವರ್ತಕ ಮಹಮ್ಮದ ಶಫಿಯ ವರ್ತನೆಯಿಂದ ಮಾರುಕಟ್ಟೆ ಹೆಸರಿಗೆ ಕಳಂಕ ಬಂದಿರುವುದು ಖೇದಕರ ಸಂಗತಿಯಾಗಿದೆ ಎಂದರು.

ವಕೀಲ ಎನ್.ಎಸ್. ಬಟ್ಟಲಕಟ್ಟಿ, ಸುರೇಶ ಉದ್ಯೋಗಣ್ಣವರ ದೂರು ಸಲ್ಲಿಸಿದರು. ಈ ವೇಳೆ ಬಿಜೆಪಿ ಮುಖಂಡರಾದ ಹಾಲೇಶ ಜಾಧವ, ಶಿವಯೋಗಿ ಶಿರೂರ, ಈರಣ್ಣ ಬಣಕಾರ, ಗಣೇಶ ಅಚಲಕರ, ಪ್ರಕಾಶ ಅಂಕಲಕೋಟಿ, ನಂದೀಶ ವೀರನಗೌಡ್ರ, ಸುಭಾಸ್ ಮಾಳಗಿ, ಪ್ರಶಾಂತ ಯಾದವಾಡ, ಪ್ರದೀಪ ಜಾಧವ, ಮಂಜುನಾಥ ಜಾಧವ, ಸಂಗಮೇಶ ಬೇವಿನಮಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.