ADVERTISEMENT

ವಚನ ಪಿತಾಮಹ ಫ. ಗು. ಹಳಕಟ್ಟಿಯವರ ಜಯಂತಿ ಆಚರಣೆ 

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:10 IST
Last Updated 3 ಜುಲೈ 2025, 15:10 IST
ರಾಣೆಬೆನ್ನೂರು ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿ ಜಯಂತಿಯನ್ನು ಆಚರಿಸಲಾಯಿತು
ರಾಣೆಬೆನ್ನೂರು ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿ ಜಯಂತಿಯನ್ನು ಆಚರಿಸಲಾಯಿತು   

ರಾಣೆಬೆನ್ನೂರು: ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ಇಪ್ಪತ್ತನೇ ಶತಮಾನದ ಪ್ರಾತಃಸ್ಮರಣೀಯರಲ್ಲಿ ಪ್ರಮುಖರು ಎಂದು ಪ್ರಾಚಾರ್ಯ ಪಿ. ಮುನಿಯಪ್ಪ ಹೇಳಿದರು.

ತಾಲ್ಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಗುರುವಾರ ಫ. ಗು. ಹಳಕಟ್ಟಿಯವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೀವನದ ಮಹೋದ್ದೇಶ ವಚನಕಾರರನ್ನು ಹಾಗೂ ಶರಣ ಸಾಹಿತ್ಯವನ್ನು ಹುಡುಕಿ ತೆಗೆದು ಸಮಾಜದ ಮಡಿಲಿಗೆ ಹಾಕಿ ಮುಸುಕಿದ್ದ ಅಜ್ಞಾನದ ಅಂಧಕಾರವನ್ನು ಸರಿಸಿ ಜ್ಞಾನ ನೀಡುವುದಾಗಿತ್ತು ಎಂದರು.

ADVERTISEMENT

ಎಚ್.ಶಿವಾನಂದ, ಸಿದ್ದರಾಮಯ್ಯಗೌಡ, ರಂಗಣ್ಣ ಹೆಚ್.ಬಿ, ಪೂರ್ಣಿಮಾ ಮಗನೂರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.