ADVERTISEMENT

ಸಂಸ್ಕಾರ, ಆದರ್ಶ ಗುಣ ಅಳವಡಿಸಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 4:25 IST
Last Updated 25 ಆಗಸ್ಟ್ 2025, 4:25 IST
ರಾಣೆಬೆನ್ನೂರಿನ ಜೀವೆಶ್ವರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸ್ವಕುಳ ಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ, ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಪಾಲ್ಗೊಂಡಿದ್ದರು
ರಾಣೆಬೆನ್ನೂರಿನ ಜೀವೆಶ್ವರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸ್ವಕುಳ ಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ, ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಪಾಲ್ಗೊಂಡಿದ್ದರು   

ರಾಣೆಬೆನ್ನೂರು: ʻಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣ ಅಳವಡಿಸಿಕೊಳ್ಳಬೇಕುʼ ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ನಗರದ ಜೀವೇಶ್ವರ ಸಭಾ ಭವನದಲ್ಲಿ ಸ್ವಕುಳ ಸಾಳಿ ಸಮಾಜದಿಂದ ಕರ್ನಾಟಕ ರಾಜ್ಯ ಸ್ವಕುಳ ಸಾಳಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ, ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪದವಿಯ ಜೊತೆ ಕಂಪ್ಯೂಟರ್‌, ಸ್ಪೋಕನ್‌ ಇಂಗ್ಲಿಷ್‌ ಸೇರಿದಂತೆ ವಿವಿಧ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ನಮ್ಮ ಪಿಕೆಕೆ ಸಂಸ್ಥೆ, ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ನೀಡಲು ಮುಂದಾಗಿದೆ. ಯುವಕ ಯುವತಿಯರು ಮಾರ್ಗದರ್ಶನ ಪಡೆಯಬಹುದು’ ಎಂದರು.

ADVERTISEMENT

ಐರಣಿ ಮನಿಮಠದ ಗಜದಂಡ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷ ಚಂಪಕ ರಮೇಶ್ ಬಿಸಲಹಳ್ಳಿ, ಸ್ವಕುಳ ಸಾಳಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಚಿಲ್ಲಾಳ, ಶಶಿಕಲಾ ಚೌದರಿ, ರಾಮಕೃಷ್ಣ ತಾಂಬೆ, ದೇವೇಂದ್ರ ರೋಖಡೆ, ಗೀತಾಬಾಯಿ ಏಕಬೋಟೆ, ತಾಲ್ಲೂಕು ಘಟಕದ ಅಧ್ಯಕ್ಷ ವಿಠಲ್ ಏಡಕೆ, ಪ್ರೊ. ಧೀರೇಂದ್ರ ಏಕಬೋಟೆ, ವೆಂಕಟೇಶ ಏಕಬೋಟೆ, ಕರಬಸಪ್ಪ ಏಕಬೋಟೆ ಹಾಗೂ ಜಿವ್ವೇಶ್ವರ ಮಹಿಳಾ ಮಂಡಳಿ ಸದಸ್ಯೆಯರು ಇದ್ದರು. ನಂತರ ಜೀವೇಶ್ವರ ಮಹಿಳಾ ಮಂಡಳದ ಸದಸ್ಯರು, ಸಾಂಸ್ಕೃತಿಕ ಪ್ರತಿಭೆ ಮೆರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.