ADVERTISEMENT

ಹಾವೇರಿ: ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 16:17 IST
Last Updated 10 ಏಪ್ರಿಲ್ 2019, 16:17 IST
ಹಾವೇರಿಯಲ್ಲಿ ಬುಧವಾರ ರಾತ್ರಿ ಮಳೆ ಸುರಿಯಿತು. - ಪ್ರಜಾವಾಣಿ ಚಿತ್ರ:ನಾಗೇಶ ಬಾರ್ಕಿ
ಹಾವೇರಿಯಲ್ಲಿ ಬುಧವಾರ ರಾತ್ರಿ ಮಳೆ ಸುರಿಯಿತು. - ಪ್ರಜಾವಾಣಿ ಚಿತ್ರ:ನಾಗೇಶ ಬಾರ್ಕಿ   

ಹಾವೇರಿ:ಕೆಲವು ದಿನಗಳಿಂದ ಸತತ ಝಳಕ್ಕೆ ಬಸವಳಿದಿದ್ದ ಜಿಲ್ಲೆಯ ಜನತೆಯ ಮೊಗದಲ್ಲಿಬುಧವಾರ ಸಂಜೆ ವರುಣನ ಸಿಂಚನವು ಮಂದಹಾಸ ಮೂಡಿತು. ಮಧ್ಯಾಹ್ನ 40 ಸೆಲ್ಸಿಯ್ಸ್ ಡಿಗ್ರಿ ಸಮೀಪಿಸಿದ್ದ ತಾಪಮಾನದಿಂದ ಬಿಸಿಯೇರಿದ್ದರೆ, ಸಂಜೆ ತಂಗಾಳಿ ಜೊತೆ ಸುರಿದ ಮಳೆ ಮುದ ನೀಡಿತು.

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಜೆ ಮೋಡ ಕವಿದ ವಾತಾವರಣವಿತ್ತು. ಹಾನಗಲ್‌ ಹಾಗೂ ಬಂಕಾಪುರ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು.

ಹಾವೇರಿ, ಸವಣೂರ, ಗುತ್ತಲದಲ್ಲಿ ಗುಡುಗು– ಮಿಂಚಿನ ಆರ್ಭಟದೊಂದಿಗೆ ಉತ್ತಮ ಮಳೆಯಾಯಿತು. ಶಿಗ್ಗಾವಿ ಮತ್ತು ಬ್ಯಾಡಗಿ ತಾಲ್ಲೂಕಿನಲ್ಲಿ ತುಂತುರು ಮಳೆ ಸುರಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.