ADVERTISEMENT

ಈಶ್ವರ, ವಿಘ್ನೇಶ್ವರ ದೇವರ ಮೂರ್ತಿಗಳ ಪ್ರತಿಷ್ಠಾಪನೆ 

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:06 IST
Last Updated 9 ಮೇ 2025, 15:06 IST
ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಈಶ್ವರ ಮತ್ತು ವಿಘ್ನೇಶ್ವರ ದೇವರ ನೂತನ ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ಸಭೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಉದ್ಘಾಟಿಸಿದರು
ರಾಣೆಬೆನ್ನೂರಿನ ಅಡವಿ ಆಂಜನೇಯ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಈಶ್ವರ ಮತ್ತು ವಿಘ್ನೇಶ್ವರ ದೇವರ ನೂತನ ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ಸಭೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಉದ್ಘಾಟಿಸಿದರು   

ರಾಣೆಬೆನ್ನೂರು: ದಾನಿಗಳು ಹಾಗೂ ಭಕ್ತರಿಂದ ನಿರ್ಮಾಣಗೊಂಡ ಖಾಸಗಿ ದೇವಸ್ಥಾನಗಳು ಏಳು- ಬೀಳುಗಳೊಂದಿಗೆ ಅಭಿವೃದ್ಧಿಗೊಂಡು ಆದಾಯ ಬರುವ ಹೊತ್ತಿಗೆ ಅವುಗಳನ್ನು ಸರ್ಕಾರವು ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ನಿಚ್ಚವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯಲ್ಲಿ ಈಚೆಗೆ ನೂತನವಾಗಿ ನಿರ್ಮಿಸಲಾದ ಈಶ್ವರ ಮತ್ತು ವಿಘ್ನೇಶ್ವರ ದೇವರ ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ, ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ, ಸಿದ್ದಣ್ಣ ಚಿಕ್ಕಬಿದರಿ, ದೇವಸ್ಥಾನ ಸಮಿತಿಯ ಗದಿಗೆಪ್ಪ ಮಣ್ಣೂರ, ರಮೇಶ್ ಜಾಧವ, ವಿನಾಯಕ ಸಣ್ಣಗೌಡ್ರ, ಶ್ರೀನಿವಾಸ್ ವಾಸನದ, ರಾಜಶೇಖರ ಹಿರೇಮಠ, ಪ್ರಶಾಂತ್ ಹಿತ್ತಲಮನಿ, ಡಿಳ್ಳೆಪ್ಪ ಮರಡಿ, ನಂದೀಶ ಚಂದನಕೇರಿ, ಎಂ ಚಿರಂಜೀವಿ, ಹನುಮಂತಗೌಡ ಸಣ್ಣಗೌಡ್ರ, ಸುಧೀರ ಚಿಂದವಾಳ, ವೆಂಕಟೇಶ ಮೈದಾರ, ನಿಂಗಪ್ಪ ಚಪ್ಪರದ ಮನಿಮಲ್ಲಿಕಾರ್ಜುನ ಹಲಗೇರಿ, ಬಸವರಾಜ ಪಟ್ಟಣಶೆಟ್ಟಿ, ನಾಗರಾಜ ಕಿತ್ತೂರ ಇದ್ದರು .

ADVERTISEMENT

ಹಿರೇಮಠ ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರು ಈಶ್ವರ ಹಾಗೂ ಬಸವೇಶ್ವರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕಳಸಾರೋಹಣವನ್ನು ಕಾರ್ಯಕ್ರಮ ನೆರವೇರಿಸಿದರು.

ಗುಡ್ಡಪ್ಪ ಹಿಂದಿನಮನಿ, ಮತ್ತು ಯಕ್ಲಾಸಪುರದ ಜನನಿ ಜಾನಪದ ವೇದಿಕೆಯ ಕಲಾವಿದ ಪರಶುರಾಮ ಬಣಕಾರ ಜನನ ಮತ್ತು ಶಿವಕುಮಾರ್ ಜಾಧವ್ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.